ವಯನಾಡು: ಸ್ಕೂಟರ್ ಕಮರಿಗೆ ಬಿದ್ದು ವೈದ್ಯಕೀಯ ವಿದ್ಯಾರ್ಥಿನಿ ನಿಧನ

Prasthutha|

ವಯನಾಡ್: ಸ್ಕೂಟರ್ ಕಮರಿಗೆ ಬಿದ್ದ ಪರಿಣಾಮ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿರುವ ಘಟನೆ ವಯನಾಡ್ ಜಿಲ್ಲೆಯ ಕಲ್ಪೆಟ್ಟಾದಲ್ಲಿ ನಡೆದಿದೆ.

- Advertisement -


ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಒ.ಎಂ.ಎ.ಸಲಾಂ ಅವರ ಪುತ್ರಿ, ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಫಾತಿಮಾ ತಸ್ಕಿಯಾ (24) ಮೃತರು.


ಕಲ್ಪೆಟ್ಟಾದಲ್ಲಿ ನಡೆದ ವೈದ್ಯಕೀಯ ಆರೋಗ್ಯ ಕ್ಲಬ್ ಸಭೆಯಿಂದ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

Join Whatsapp