ಮಂಗಳೂರು | ಪಶ್ಚಿಮಘಟ್ಟದಲ್ಲಿ ಉತ್ತಮ ಮಳೆ: ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 4.3 ಮೀಟರ್‌ಗೆ ಏರಿಕೆ

Prasthutha|

- Advertisement -

ಮಂಗಳೂರು: ಪಶ್ಚಿಮಘಟ್ಟದಲ್ಲಿ ಇತ್ತೀಚೆಗೆ ಸುರಿದ ಉತ್ತಮ ಮಳೆಯಿಂದಾಗಿ ನೇತ್ರಾವತಿ ನದಿಯ ಒಳಹರಿವು ಹೆಚ್ಚಾಗಿದೆ.

ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ 4.3 ಮೀಟರ್‌ಗೆ ಏರಿಕೆಯಾಗಿದೆ. ನಗರದಲ್ಲಿ ತಲೆದೋರಿದ್ದ ನೀರಿನ ಅಭಾವ ಸದ್ಯಕ್ಕೆ ಬಗೆಹರಿದಿದೆ.

- Advertisement -

ಶಂಭೂರಿನ ಎಎಂಆರ್ ಅಣೆಕಟ್ಟಿನ ನೀರಿನ ಮಟ್ಟವು ಹೆಚ್ಚಾಗತೊಡಗಿದ್ದು, ಅದರಂತೆ ಎಎಂಆರ್ ಡ್ಯಾಂನಿಂದ ತುಂಬೆ ವೆಂಟೆಡ್ ಡ್ಯಾಂಗೆ ನೀರು ಹರಿಸಲಾಗಿದೆ. ಗುರುವಾರ ತುಂಬೆ ವೆಂಟೆಡ್ ಅಣೆಕಟ್ಟಿನ ಮಟ್ಟ 4.3 ಮೀಟರ್ ಆಗಿದೆ.

Join Whatsapp