ಡೆಹ್ರಾಡೂನ್: ಇತ್ತೀಚೆಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಜಿತೇಂದ್ರ ತ್ಯಾಗಿ ಅಲಿಯಾಸ್ ವಸೀಮ್ ರಿಝ್ವಿ , ಇಸ್ಲಾಮಿನಲ್ಲಿ ನಂಬಿಕೆಯಿಲ್ಲದವರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆಯ ಆರೋಪದಲ್ಲಿ ಪ್ರವಾದಿ ಮುಹಮ್ಮದ್ ಮತ್ತು ಮೂವರು ಖಲೀಫರಾದ ಅಬೂಬಕ್ಕರ್ ಸಿದ್ದೀಕ್ , ಉಮರ್ ಮತ್ತು ಉಸ್ಮಾನ್ ಅವರ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಇತ್ತೀಚಿನ ದ್ವೇಷ ಭಾಷಣ ಪ್ರಕರಣದ ಆರೋಪಿಯಾಗಿರುವ ತ್ಯಾಗಿ ಹರಿದ್ವಾರ ಪೊಲೀಸರಿಗೆ ಈ ಸಂಬಂಧ ದೂರು ಸಲ್ಲಿಸಿದ್ದು, ಎಫ್.ಐ.ಆರ್. ದಾಖಲಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಾತ್ರವಲ್ಲ ಧರ್ಮ ಸಂಸತ್ ಕಾರ್ಯಕ್ರಮ ಆಯೋಜಿಸಿದ್ದ ಯತಿ ನರಸಿಂಹಾನಂದ ಗಿರಿ ಮತ್ತು ಇತರರನ್ನು ಹತ್ಯೆ ಮಾಡಲು ಯತ್ನಿಸಲಾಗಿದೆ ಎಂದು ತ್ಯಾಗಿ ಆರೋಪಿಸಿದ್ದಾನೆ.