ಜೋಧ್‌ಪುರ (ರಾಜಸ್ಥಾನ): BSF ಸಹಾಯಕ ತರಬೇತಿ ಕೇಂದ್ರದ ಸೈನಿಕರು ಅಂತಾರಾಷ್ಟ್ರೀಯ ಯೋಗ ದಿನದಂದು ಒಂಟೆಗಳ ಮೇಲೆ ಮಾಡಿದ ಯೋಗ ಪ್ರದರ್ಶನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಯೋಧರು ಜೂನ್ 21 ರಂದು ವಿಶ್ವ ಯೋಗ ದಿನದ ನಿಮಿತ್ತ ಒಂಟೆಗಳ ಮೇಲೆ ಹಲವಾರು ಯೋಗ ಪ್ರದರ್ಶನಗಳನ್ನು ಮಾಡಿ ಶಕ್ತಿ ಮತ್ತು ಏಕಾಗ್ರತೆ ಪ್ರದರ್ಶಿಸಿದ್ದರು. BSF ಯೋಧರು ಮಾಡಿರುವ ಯೋಗ ವಿವಾದಕ್ಕೆ ಕಾರಣವಾಗಿದೆ. ಈ ಯೋಗಾಸನದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಿಮಗೆ ಯೋಗ ಮಾಡಲು ಬೇರೆ ಸ್ಥಳಗಳು ಸಿಗಲಿಲ್ಲವೇ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಈ ರೀತಿ ಯೋಗ ಮಾಡಿದ ಸೈನಿಕರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಂಡಿದ್ದಾರೆ.