ಬೀಜಿಂಗ್: ಯಾವುದೇ ರಾಷ್ಟ್ರ ತೈವಾನ್ ಅನ್ನು ಚೀನಾದಿಂದ ಬೇರ್ಪಡಿಸುವ ದುಸ್ಸಾಹಸಕ್ಕೆ ಮುಂದಾದರೆ ನಮ್ಮ ಸೈನ್ಯವು ಅಂತಹ ದೇಶದ ವಿರುದ್ಧ ಯುದ್ಧ ಘೋಷಣೆಗೆ ಹಿಂಜರಿಯುವುದಿಲ್ಲ ಎಂದು ರಕ್ಷಣಾ ಸಚಿವ ವೀ ಫೆಂಗ್ಹೆ ಹೇಳಿದ್ದಾರೆ.
ರಕ್ಷಣಾ ಸಚಿವರ ಹೇಳಿಕೆಯನ್ನು ದೇಶದ ರಕ್ಷಣಾ ಸಚಿವಾಲಯದ ವಕ್ತಾರ ಬಿಡುಗಡೆಗೊಳಿಸಿದ್ದಾರೆ. ಸಿಂಗಾಪುರದಲ್ಲಿ ನಡೆದ ರಕ್ಷಣಾ ಶೃಂಗ ಸಭೆಯ ವೇಳೆ ಅಮೆರಿಕದ ಲಯ್ಡ್ ಆಸ್ಟಿನ್ ಅವರ ಭೇಟಿಯ ವೇಳೆ ಈ ಹೇಳಿಕೆ ನೀಡಿದ್ದಾರೆ.
ತೈವಾನ್ ಸ್ವತಂತ್ರ ಆಡಳಿತವಿರುವ ಪ್ರದೇಶವಾಗಿದ್ದು, ಚೀನಾದೊಂದಿಗೆ ಏಕೀಕರಿಸುವ ಪ್ರಾಂತ್ಯವಾಗಿಸಲು ಚೀನಾ ಪ್ರಯತ್ನಿಸುತ್ತಿದೆ. ಮತ್ತೊಂದು ಕಡೆ ಎರಡು ರಾಷ್ಟ್ರಗಳು ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲವಾದರೂ ಅಮೆರಿಕವು ತೈವಾನ್’ಗೆ ಅಂತಾರಾಷ್ಟ್ರೀಯ ಬೆಂಬಲಿತ ಮತ್ತು ಶಸ್ತ್ರಾಸ್ತ್ರ ಪೂರೈಸುವ ರಾಷ್ಟ್ರವಾಗಿದೆ.