ಕಾಂಗ್ರೆಸ್ ನ ಹಗರಣದ ದಿಕ್ಕು ತಪ್ಪಿಸಲು ವಕ್ಫ್ ಮುನ್ನೆಲೆಗೆ: ಕುಮಾರಸ್ವಾಮಿ ಆರೋಪ

Prasthutha|

ರಾಮನಗರ: ಕಾಂಗ್ರೆಸ್ ನ ಹಗರಣ, ಭ್ರಷ್ಟಾಚಾರದ ವಿಚಾರ ದಿಕ್ಕು ತಪ್ಪಿಸಲು ವಕ್ಫ್ ವಿಚಾರ ಮುನ್ನೆಲೆಗೆ ಬಂದಿದೆ. ಈ ಮೂಲಕ ವಾಲ್ಮೀಕಿ ಮತ್ತು ಮುಡಾ ಹಗರಣ ಮುಚ್ಚಿಹಾಕಲು ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

- Advertisement -


ತಿಟ್ಟಮಾರನಹಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಅವರು ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಸರ್ಕಾರ ಸ್ವಯಂ ಅಪರಾಧಗಳಿಂದ ಪಥನವಾಗಲಿದೆ. ಸರ್ಕಾರವನ್ನು ಬೇರೆ ಯಾರು ಬೀಳಿಸುವುದಿಲ್ಲ ಸ್ವತಃ ಆತ್ಮಹತ್ಯೆ ಮಾಡಿಕೊಳ್ಳಲಿದೆ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಹೇಳಿದ್ದಾರೆ.


ಶಕ್ತಿ ಯೋಜನೆ ಬಗ್ಗೆ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ, ಗ್ಯಾರಂಟಿ ನಿಲ್ಲಿಸಲು ಈ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದಾರೆ. ಶಕ್ತಿ ಯೋಜನೆ ಬೇಡ ಅಂತ ಯಾರು ಹೇಳ್ತಾರೆ. ಈಗಾಗಲೇ ಅನ್ನಭಾಗಕ್ಕೂ ಸಾಕಷ್ಟು ನಿಯಮ ಜಾರಿ ಮಾಡಿದ್ದಾರೆ. ರೇಷನ್ ಕಾರ್ಡ್ ಗಳನ್ನು ಡಿಲಿಟ್ ಮಾಡುತ್ತಿದ್ದಾರೆ. ಹಂತಹಂತವಾಗಿ ಗ್ಯಾರಂಟಿ ನಿಲ್ಲಿಸುತ್ತಾರೆ. ಅದನ್ನೆ ಡಿಕೆಶಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ ಎಂದರು.




Join Whatsapp