ವಕ್ಫ್ ಆಸ್ತಿ ಶಾಸಕ ಯತ್ನಾಳ್ ಅಪ್ಪನ ಆಸ್ತಿಯಲ್ಲ: ಝಮೀರ್ ಅಹಮದ್

Prasthutha|

ವಿಜಯಪುರ: ವಕ್ಫ್ ಆಸ್ತಿ 12 ಲಕ್ಷ ಎಕರೆಯಲ್ಲ, 34 ಸಾವಿರ ಎಕರೆ ಇದೆ. ಆದರೆ ಅದು ಶಾಸಕ ಯತ್ನಾಳ್​ ಅವರ ಅಪ್ಪನ ಆಸ್ತಿಯಲ್ಲ ಎಂದು ಸಚಿವ ಝಮೀರ್ ಅಹಮದ್ ಖಾನ್ ತೀಕ್ಷ್ಣವಾಗಿ ಹೇಳಿದ್ದಾರೆ‌.

- Advertisement -

ದೇಶದಲ್ಲಿ ಸುಮಾರು 12 ಲಕ್ಷ ಎಕರೆ ಜಮೀನು ವಕ್ಫ್ ಆಸ್ತಿಯಿದೆ. ಅದನ್ನು ಬಡವರ ಕೆಲಸಕ್ಕೆ ಉಪಯೋಗಿಸಬೇಕು ಎಂದು ಯತ್ನಾಳ್​ ಹೇಳಿಕೆಗೆ ನೀಡಿದ್ದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಮೀರ್​, ಯತ್ನಾಳ್​ ಆಸ್ತಿಯೋ, ನಮ್ಮಪ್ಪನ ಆಸ್ತಿಯೋ ಇದ್ದಿದ್ದರೆ ನಾವು ಯಾರಿಗಾದರೂ ಹಂಚಬಹುದಿತ್ತು. ಇದು ಯಾರ ಅಪ್ಪನ ಆಸ್ತಿಯೂ ಅಲ್ಲ, ಇದು ವಕ್ಪ್ ಆಸ್ತಿ ಎಂದು ಕಿಡಿಗಾದ್ದಾರೆ.

- Advertisement -

ದಾನಿಗಳು ಮುಸ್ಲಿಂ ಸಮಾಜಕ್ಕೆ ಒಳ್ಳೆಯದಾಗಲಿ ಎಂದು ದಾನ ನೀಡಿದ್ದಾರೆ. ದಾನ ಮಾಡಿದವರು ಯಾವುದಕ್ಕೆ ಉಪಯೋಗ ಮಾಡಬೇಕೆಂಬುದನ್ನು ಕೂಡ ತಿಳಿಸಿರುತ್ತಾರೆ. ಶಿಕ್ಷಣ, ಸ್ಮಶಾನ, ಈದ್ಗಾ, ಮಸೀದಿ ಕಟ್ಟಲು ಉಪಯೋಗಿಸಬೇಕೆಂದು ದಾನ ಮಾಡಿರುತ್ತಾರೆ ಎಂದು ಹೇಳಿದ್ದಾರೆ.

Join Whatsapp