ವಕ್ಫ್ ಬೋರ್ಡ್; ಓಲೈಸಲು ಹೋದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಕುಮಾರಸ್ವಾಮಿ ಎಚ್ಚರಿಕೆ

Prasthutha|

ಬೆಂಗಳೂರು: ಯಾರನ್ನೋ ಓಲೈಸಲು ಸರ್ಕಾರದ ಆಸ್ತಿ ಲೂಟಿ ಹೊಡೆಯುವವರಿಗೆ ರಕ್ಷಣೆ ಕೊಟ್ಟರೆ ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

- Advertisement -

ವಿಜಯಪುರ, ಧಾರವಾಡದ ರೈತರ ಜಮೀನಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಕ್ಯಾಬಿನೆಟ್ ನಲ್ಲಿ ವಕ್ಫ್ ಗೆ ಸಂಬಂಧಿಸಿದಂತೆ ಚರ್ಚೆ ಆಗಿದೆ. ವಕ್ಫ್ ಬಗ್ಗೆ ಚರ್ಚೆ ಆಗಬೇಕು ಎಂದು ಕೇಂದ್ರದಲ್ಲಿ ತೀರ್ಮಾನ ಆಗಿದೆ. ಇವತ್ತು ಕರ್ನಾಟಕದಲ್ಲಿ ವಾತಾವರಣದಿಂದ ರೈತರು ಭಯಭೀತರಾಗಿದ್ದಾರೆ. ಮೊನ್ನೆ ವಿಜಯಪುರ ಆಯ್ತು, ನಿನ್ನೆ ಧಾರವಾಡದಲ್ಲಿ ಇದೇ ಸಮಸ್ಯೆ ಆಗಿದೆ ಎಂದು ತಿಳಿಸಿದರು.

ರೈತರ ಭೂಮಿ ಆಗಲಿ, ಸರ್ಕಾರದ ಭೂಮಿ ಆಗಲಿ ವಕ್ಫ್ ಹೆಸರಿನಲ್ಲಿ ಯಾರೋ ನಾಲ್ಕು ಜನ, ಆ ಸಮಾಜಕ್ಕೆ ಸೇರಿದವರು ಅಥವಾ ಭೂಗಳ್ಳರು ಆ ಭೂಮಿಯನ್ನ ಸ್ವೇಚ್ಛಾಚಾರವಾಗಿ ಕಾನೂನು ಬಾಹಿರವಾಗಿ ಲಪಟಾಯಿಸುತ್ತಿದ್ದಾರೆ. ಆ ಸತ್ಯಾಂಶಗಳು ಹೊರಗೆ ಬರಬೇಕು ಅನ್ನೋದು ನನ್ನ ಅಭಿಪ್ರಾಯ ಎಂದರು.

- Advertisement -

ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ. ಈ ರೀತಿ ಯಾರನ್ನೋ ಓಲೈಸುವಂತಹ ಕೆಲಸ ಮಾಡಿ ಸರ್ಕಾರದ ಆಸ್ತಿಯನ್ನ ಲೂಟಿ ಹೊಡೆಯೋರಿಗೆ ರಕ್ಷಣೆ ಕೊಡುವುದಕ್ಕೆ ಹೋದರೆ ಅದಕ್ಕೆ ದೊಡ್ಡ ಮಟ್ಟದ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.



Join Whatsapp