ಗೋಡೆ ಕುಸಿದು ನಾಲ್ವರ ಸಾವು: ವಿಮೆನ್ ಇಂಡಿಯಾ ಮೂಮೆಂಟ್ ಸಂತಾಪ

Prasthutha|

ಸರಕಾರದ ನಿರ್ಲಕ್ಷತನವೇ ಮುಖ್ಯಕಾರಣ ಎಂದ ನೌರೀನ್ ಆಲಂಪಾಡಿ

- Advertisement -

ಮಂಗಳೂರು: ಮುನ್ನೂರು ಗ್ರಾಮದ ಕುತ್ತಾರ್ ಸಮೀಪದ ಮದನಿ ನಗರದಲ್ಲಿ ಮೇಲಿನ ಮನೆಗೆ ಅಳವಡಿಸಲಾಗಿದ್ದ ಆವರಣದ ಗೋಡೆ ಕುಸಿದು ಬಿದ್ದು ಒಂದೇ ಮನೆಯ ತಂದೆ ತಾಯಿ ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತನು ನೀಡಲಿ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ನೌರೀನ್ ಆಲಂಪಾಡಿ ಸಂತಾಪವನ್ನು ಸೂಚಿಸಿದ್ದಾರೆ.

ಪ್ರತೀ ಮಳೆಗಾಳದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಅಮಾಯಕರು ಬಲಿಯಾಗುತ್ತಿರುತ್ತಾರೆ. ಶಾಸಕರ ಮತ್ತು ರಾಜ್ಯ ಸರಕಾರದ ನಿರ್ಲಕ್ಷತನವೇ ಇದಕ್ಕೆ ಮುಖ್ಯಕಾರಣವಾಗಿರುತ್ತದೆ.ಎಂದು ಆಕ್ರೋಶವಮ್ನೂ ಅವರು ವ್ಯಕ್ತಪಡಿಸಿದ್ದಾರೆ.

- Advertisement -

ಸರಕಾರ ಸೂಕ್ತ ಪರಿಹಾರವನ್ನು ಕುಟುಂಬಸ್ಥರಿಗೆ ಒದಗಿಸಬೇಕೆಂದು ಒತ್ತಾಯಿಸಿದ ಅವರು, ಜಿಲ್ಲಾಡಳಿತ ಮತ್ತು ಕರ್ನಾಟಕ ಸರಕಾರ ಘಟನೆಯ ಬಳಿಕ ಎಚ್ಚರವಾಗುವುದಕ್ಕಿಂತ ಕೂಡಲೇ ಮುಂಜಾಗ್ರತಾ ಕ್ರಮವಾಗಿ ಅಪಾಯದಲ್ಲಿರುವ ಮನೆಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗಿ ಪತ್ರಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

Join Whatsapp