ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಬದುಕಿರುವ ಸಾಧ್ಯತೆಯಿಲ್ಲ: ಯುಎಸ್ ಮಿಲಿಟರಿ ಅಧಿಕಾರಿ

Prasthutha|

►ಪುಟಿನ್ ವಿರುದ್ಧದ ವಿಫಲ ದಂಗೆ ನಡೆಸಿದ್ದ ಯೆವ್ಗೆನಿ ಪ್ರಿಗೋಷಿನ್‌

- Advertisement -

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧದ ವಿಫಲ ದಂಗೆಯ ನಂತರ ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಷಿನ್‌ ಸತ್ತಿರಬಹುದು ಅಥವಾ ಜೈಲಿನಲ್ಲಿದ್ದಾರೆ ಎಂದು ಯುಎಸ್ ಮಾಜಿ ಮಿಲಿಟರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದಂಗೆಯ ಐದು ದಿನಗಳ ನಂತರ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಿಗೋಷಿನ್‌ ರನ್ನು ಭೇಟಿಯಾದರು ಎಂದು ರಷ್ಯಾ ಹೇಳಿಕೊಂಡ ನಂತರ ಮಾಜಿ ಯುಎಸ್ ಜನರಲ್ ರಾಬರ್ಟ್ ಅಬ್ರಾಮ್ಸ್ ಎಬಿಸಿ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ.

- Advertisement -

“ನನ್ನ ವೈಯಕ್ತಿಕ ಮೌಲ್ಯಮಾಪನವೆಂದರೆ ನಾವು ಪ್ರಿಗೋಷಿನ್‌ ಅವರನ್ನು ಮತ್ತೆ ಸಾರ್ವಜನಿಕವಾಗಿ ನೋಡುತ್ತೇವೆ ಎಂದು ನನಗೆ ಅನುಮಾನವಿದೆ. ಅವರು ತಲೆಮರೆಸಿಕೊಂಡಿರಬಹುದು, ಜೈಲಿಗೆ ಕಳುಹಿಸಲಾಗಿರಬಹುದು ಅಥವಾ ಬೇರೆ ರೀತಿಯಲ್ಲಿ ವ್ಯವಹರಿಸಲಾಗಿರಬಹುದು ಎಂದು ನಾನು ಭಾವಿಸುತ್ತೇನೆ. ಆದರೆ ನಾವು ಅವರನ್ನು ಮತ್ತೆ ನೋಡುತ್ತೇವೆ ಎಂದು ನನಗೆ ಅನುಮಾನವಿದೆ”ಎಂದು ಅಬ್ರಾಮ್ಸ್ ಉಲ್ಲೇಖಿಸಿದ್ದಾರೆ.