ಮತದಾರ ವೆಡ್ಸ್ ಪ್ರಜಾಪ್ರಭುತ್ವ | ಆಮಂತ್ರಣ ಪತ್ರಿಕೆ ವೈರಲ್

Prasthutha|

ಯಾದಗಿರಿ: ರಾಜ್ಯಾದ್ಯಂತ ನಾಳೆ ಮತದಾನ ನಡೆಯಲಿದ್ದು, ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ಯಾದಗಿರಿ ಜಿಲ್ಲಾಡಳಿತ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದೆ.

- Advertisement -


ಮತದಾರರಲ್ಲಿ ಜಾಗೃತಿ ಮೂಡಿಸಲು ಯಾದಗಿರಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಈ ಆಮಂತ್ರಣದ ವಿಶೇಷವೆಂದರೆ ಯಾದಗಿರಿಯಲ್ಲೂ ಮತದಾರರಿಗೆ ಮತದಾನದ ಮಮತೆಯ ಕರೆಯೋಲೆ ನೀಡಲಾಯಿತು.


ಚುನಾವಣಾ ಆಯೋಗ ನಿಶ್ಚಯಿಸಿದಂತೆ ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಮತದಾನ ದಿನ ಸಲ್ಲುವ ಶುಭ ಮಹೂರ್ತದಲ್ಲಿ ಭಾರತ ಮಾತೆಯ ಪ್ರಬುದ್ಧ ಪ್ರಜೆಯಾದ ಮತದಾರ ಜೊತೆ ಪ್ರಜಾಪ್ರಭುತ್ವ ಈ ಮಹತ್ವದ ಶುಭ ಕಾರ್ಯದಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿದು ಜನರಿಂದ ಜನರಿಗೋಸ್ಕರ ಸಂವಿಧಾನಬದ್ಧ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ವಿನಂತಿ ಎಂದು ಬರೆಯಲಾಗಿದೆ.

Join Whatsapp