ಹೆಸರು ಸೇರ್ಪಡೆಗೆ ‘ಮತದಾರರ ಸಹಾಯವಾಣಿ’ ಆ್ಯಪ್: ಮುಖ್ಯ ಚುನಾವಣಾಧಿಕಾರಿ

Prasthutha|

ಬೆಂಗಳೂರು: ‘ಮತದಾರರ ಸಹಾಯವಾಣಿ’ ಆ್ಯಪ್‌ ಮೂಲಕ ದೇಶದ ಯಾವುದೇ ಮೂಲೆಯಲ್ಲಿದ್ದರೂ ನೋಂದಣಿ ಮಾಡಿಕೊಳ್ಳುವ ಮೂಲಕ ಮತದಾರರ ಪಟ್ಟಿಗೆ ಸೇರಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯ ಮಂಗಳವಾರ ಹಮ್ಮಿಕೊಂಡಿದ್ದ ಮತದಾರರ ನೋಂದಣಿ ಜಾಗೃತಿ ಅಭಿಯಾನ ಮತ್ತು ಸಂವಿಧಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಶೇ 99ರಷ್ಟು ಮತದಾರರ ನೋಂದಣಿ ಆನ್‌ಲೈನ್‌ ಮೂಲಕವೇ ನಡೆದಿದೆ. 18 ವರ್ಷ ತುಂಬಿದ ಯುವ ಜನರು ಸದೃಢ ದೇಶ ಕಟ್ಟಲು, ಭವಿಷ್ಯದ ಭಾರತ ನಿರ್ಮಾಣಕ್ಕಾಗಿ ಮತದಾರರ ಪಟ್ಟಿಗೆ ಸೇರಬೇಕು ಎಂದು ಸಲಹೆ ನೀಡಿದರು.

- Advertisement -

ಮೊಬೈಲ್‍ಗಳಲ್ಲಿ ಪ್ಲೇಸ್ಟೋರ್, ಅಪ್‍ಸ್ಟೋರ್‍ನಿಂದ Voter helpline Mobile App (VHA) ಅನ್ನು ಡೌನ್‍ಲೋಡ್ ಮಾಡಿಕೊಳ್ಳುವುದರಿಂದ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಬಹುದು.

ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಮಾಹಿತಿ:  ಮತದಾರರ ಪಟ್ಟಿಗೆ ಹೆಸರು ನೊಂದಣಿ ಮಾಡುವ ಬಗ್ಗೆ, ಮತದಾರರು ತಮ್ಮ ಹೆಸರನ್ನು ವಿಧಾನ ಸಭಾ ಕ್ಷೇತ್ರದಿಂದ ಬೇರೆ ವಿಧಾನ ಸಭಾ ಕ್ಷೇತ್ರಕ್ಕೆ ವರ್ಗಾವಣೆ ಮಾಡುವ ಬಗ್ಗೆ, ಮತದಾರರು ತಮ್ಮ ಹೆಸರನ್ನು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವರ್ಗಾವಣೆ ಮಾಡುವ ಬಗ್ಗೆ, ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡುವ ಬಗ್ಗೆ, ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

- Advertisement -