ಪಂಚಾಯತ್ ಚುನಾವಣೆ: ಮತದಾರರನ್ನು ಸೆಳೆಯಲು ಮೀನಿನೊಂದಿಗೆ ಮತಯಾಚನೆ

Prasthutha|

ಭುವನೇಶ್ವರ: ಇಲ್ಲಿನ ಪಾಪದಹಂಡಿ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಹಿಳೆಗೆ ಮೀನಿನ ಚಿಹ್ನೆ ನೀಡಿರುವ ಹಿನ್ನೆಲೆಯಲ್ಲಿ ಜೀವಂತ ಮೀನಿನೊಂದಿಗೆ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ.

- Advertisement -

ನಬರಂಗಪುರ ಜಿಲ್ಲಾ ಪರಿಷತ್‌ ಮಾಜಿ ಅಧ್ಯಕ್ಷ ಭಗಬತಿ ಭಟ್ರಾ ಅವರೇ ಈ ರೀತಿ ಕ್ಯಾಂಪೇನ್‌ ಮಾಡಿದ್ದಾರೆ.

ಭುವನೇಶ್ವರದ ಪಾಪದಹಂಡಿ ಬ್ಲಾಕ್‌ ನ ಪತ್ರಿ ಪಂಚಾಯಿತಿಯ ವ್ಯಾಪ್ತಿಯಲ್ಲಿ ಮತದಾರರ ಗಮನ ಸೆಳೆಯಲು ಅಭ್ಯರ್ಥಿ ಜೀವಂತ ಮೀನನ್ನು ಕೈಯಲ್ಲಿ ಹಿಡಿದುಕೊಂಡು ಮನೆಗೆ ತೆರಳಿ ತಮಗೆ ಮತ ನೀಡುವಂತೆ ಕೇಳುತ್ತಿರುವ  ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Whatsapp