ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಸಾವಿರಾರು ಮಂದಿ ಸ್ಥಳಾಂತರ

Prasthutha|

ಇಂಡೋನೇಷ್ಯಾದ ರುವಾಂಗ್ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ.

- Advertisement -


ಹೊಗೆ, ಶಾಖದ ಪರಿಣಾಮವು ಬಹು ದೂರದವರೆಗೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ.


ಐದು ಕಡೆ ಜ್ವಾಲಾಮುಖಿ ಸ್ಫೋಟ ಸಂಭವಿಸಿದೆ, ಇಂಡೋನೇಷ್ಯಾದ ಉತ್ತರ ಸುಲಾವೆಸಿಯಲ್ಲಿ ಪರ್ವತದಲ್ಲಿ ಈ ಸ್ಪೋಟ ಸಂಭವಿಸಿದ್ದು, ಲಾವಾ ಹಾಗೂ ಬಿಸಿ ಬೂಧಿ ಆಕಾಶದೆತ್ತರಕ್ಕೆ ವ್ಯಾಪಿಸಿದೆ.
ರಾಯಧಾನಿ ಮನಾಡೋದ ಸುಮಾರು 100 ಕಿ.ಮೀ ದೂರದ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಿಸಿದೆ. ಈ ಜ್ವಾಲಾಮುಖಿ ಒಂದೇ ದಿನದಲ್ಲಿ ಐದು ಬಾರಿ ಜೋರಾಗಿ ಚಿಮ್ಮಿದೆ. ಪರ್ವತಕ್ಕೆ ಸಮುದ್ರ ಹೊಂದಿಕೊಂಡಿರುವ ಕಾರಣ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಆಡಳಿತ ಎಚ್ಚರಿಕೆ ನೀಡಿದೆ.

Join Whatsapp