ಪಪುವಾ ನ್ಯೂ ಗಿನಿಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದಿಂದ 1 ಮಿಲಿಯನ್ ಡಾಲರ್ ನೆರವು

Prasthutha|

ನವದೆಹಲಿ : ಪಪುವಾ ನ್ಯೂ ಗಿನಿಯಾದಲ್ಲಿ ಜ್ವಾಲಾಮುಖಿ ಸ್ಫೋಟ ಸಂಭವಿಸಿದ್ದು, ಸಾವು, ನೋವು, ಹಾನಿ ಉಂಟಾಗಿದೆ. ಇದರ ಪರಿಹಾರ, ಪುನರ್ವಸತಿ ಮತ್ತು ಪುನರ್ನಿರ್ಮಾಣ ಪ್ರಯತ್ನಗಳಿಗೆ ನರವಾಗಲು ತಕ್ಷಣದ ಪರಿಹಾರ ಸಹಾಯಕ್ಕಾಗಿ ಭಾರತ 1 ಮಿಲಿಯನ್ ಡಾಲರ್ ಘೋಷಿಸಿದೆ.

- Advertisement -

ವಿಪತ್ತಿನಿಂದ ಉಂಟಾದ ಹಾನಿ ಮತ್ತು ವಿನಾಶಕ್ಕಾಗಿ ಭಾರತವು ಪಪುವಾ ನ್ಯೂ ಗಿನಿಯಾ ಸರ್ಕಾರ ಮತ್ತು ಜನರಿಗೆ ಆಳವಾದ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ
ತಿಳಿಸಿದೆ.

ಪಪುವಾ ನ್ಯೂ ಗಿನಿಯಾದ ಮೌಂಟ್ ಉಲಾವುನ್ ಎಂಬ ಪ ಜ್ವಾಲಾಮುಖಿ ನವೆಂಬರ್ 20ರಂದು ಸ್ಪೋಟಿಸಿದ್ದು, 26,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಬೇಕಾಗಿ ಬಂದಿತ್ತು.



Join Whatsapp