ಹೊಸದಿಲ್ಲಿ: ಈ ಆರ್ಥಿಕ ವರ್ಷ ಮಾರ್ಚ್ 31ಕ್ಕೆ ಮುಕ್ತಾಯಗೊಂಡ ತ್ರೈಮಾಸಿಕದಲ್ಲಿ ದೇಶದ ದೈತ್ಯ ಟೆಲಿಕಾಂ ನೆಟ್ ವರ್ಕ್ ಗಳಲ್ಲಿ ಒಂದಾದ ವೊಡಾಫೋನ್ ಐಡಿಯಾ ಬರೋಬ್ಬರಿ 7000 ಕೋಟಿಗೂ ಅಧಿಕ ನಷ್ಟವನ್ನು ಅನುಭವಿಸಿದೆ ಎಂದು ಕಂಪೆನಿ ತನ್ನ ವಾರ್ಷಿಕ ಪ್ರಕಟನೆಯಲ್ಲಿ ತಿಳಿಸಿದೆ.
ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವೊಡಾಫೋನ್ ಐಡಿಯಾ ಕಂಪೆನಿಯ ಒಟ್ಟು ನಷ್ಟ 7,022 ಕೋಟಿ ರೂ ಆಗಿದ್ದು ಇದರೊಂದಿಗೆ ಹಿಂದಿನ ಅರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 11,643 ಕೋಟಿ ನಷ್ಟವನ್ನು ಅನುಭವಿಸಿತು. ಆದರೂ ಕಳೆದ ಆರ್ಥಿಕ ವರ್ಷದ ಈ ತ್ರೈಮಾಸಿಕದಲ್ಲಿ ಅನುಭವಿಸಿದ ನಷ್ಟಕ್ಕಿಂತ ಈ ಆರ್ಥಿಕ ವರ್ಷದಲ್ಲಿ ಕಡಿಮೆ ನಷ್ಟವನ್ನು ಹೊಂದಿದೆ.
ಇನ್ನು 2020-2021 ನೆಯ ಅರ್ಥಿಕ ವರ್ಷದಲ್ಲಿ ಕಂಪನಿಯ ಒಟ್ಟು ನಷ್ಟವು ಬರೋಬ್ಬರಿ 44,233 ಕೋಟಿ ಆಗಿದೆ. ಹಿಂದಿನ ವರ್ಷದಲ್ಲಿ ನಷ್ಟವು 73,878 ಕೋಟಿ ಆಗಿತ್ತು ಎಂದು ವರದಿ ತಿಳಿಸಿದೆ.