ನಟಿ ಚಿತ್ರಾ ಆತ್ಮಹತ್ಯೆ ಪ್ರಕರಣ | ಪತಿ ಹೇಮಂತ್ ಬಂಧನ

Prasthutha|

ಚೆನ್ನೈ : ತಮಿಳು ಕಿರುತೆರೆಯ ಜನಪ್ರಿಯ ನಟಿ, ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ಟ್ವಿಸ್ಟ್ ಸಿಕ್ಕಿದ್ದು, ಪತಿ ಹೇಮಂತ್ ಬಂಧನವಾಗಿದೆ. ಚಿತ್ರಾ ಮತ್ತು ಹೇಮಂತ್ ಕೆಲ ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಚಿತ್ರಾ ಸಾವಿಗೆ ಪತಿ ಹೇಮಂತ್ ಕಾರಣ ಎಂದು ಆಕೆಯ ತಾಯಿ ಆರೋಪಿಸಿದ್ದರು.

- Advertisement -

ವಿಷಯಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಿದ್ದ ಹೇಮಂತ್ ರನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ. ವಿಚಾರಣೆ ವೇಳೆ ಚಿತ್ರಾ ನಟಿಸಿದ್ದ ಕೆಲವು ದೃಶ್ಯಗಳ ಬಗ್ಗೆ ಹೇಮಂತ್ ಆಕ್ಷೇಪ ವ್ಯಕ್ತಪಡಿಸಿ ಜಗಳವಾಡಿದ್ದ ಎಂದು ತಿಳಿದುಬಂದಿದೆ.

ಚಿತ್ರಾ ಆತ್ಮಹತ್ಯೆ ಮಾಡಿದ್ದ ದಿನ ಆಕೆಯ ಮೇಲೆ ಹೇಮಂತ್ ಹಲ್ಲೆ ಕೂಡ ಮಾಡಿದ್ದನೆನ್ನಲಾಗಿದೆ. ಪಾಂಡಿಯನ್ ಸ್ಟೋರ್ಸ್ ತಮಿಳು ಶೋನಲ್ಲಿ ನಟಿಸುತ್ತಿದ್ದ 29 ವರ್ಷ ವಯಸ್ಸಿನ ವಿಜೆ ಚಿತ್ರಾ ಚೆನ್ನೈನ ನಝರತ್ ಪೇಟ್ ನಲ್ಲಿರುವ ಹೋಟೆಲ್ ರೂಂ ಒಂದರಲ್ಲಿ ಡಿ.9ರಂದು ಶವವಾಗಿ ಪತ್ತೆಯಾಗಿದ್ದರು.

Join Whatsapp