ಮಂಡ್ಯದ ಮುಸ್ಕಾನ್ ಮಕ್ಕಾ ಪ್ರವಾಸ: ಪೊಲೀಸರನ್ನು ಯಾಮಾರಿಸಿ ಹೋಗಿದ್ದಾಳೆಂದು ಸುಳ್ಳು ಹೇಳಿದ ಕನ್ನಡ ಮಾಧ್ಯಮಗಳು

Prasthutha|

►► ವಿದೇಶ ಪ್ರಯಾಣಕ್ಕೆ ಪೊಲೀಸ್ ಅನುಮತಿ ಅಗತ್ಯವಿಲ್ಲ ಎಂದ SP

- Advertisement -

ಮಂಡ್ಯ: ಕಾಲೇಜು ಪ್ರವೇಶಿಸುವ ವೇಳೆ ಕೇಸರಿ ಶಾಲುಧಾರಿಗಳು ದಾಳಿ ನಡೆಸಿದ ವೇಳೆ ಅಲ್ಲಾಹು ಅಕ್ಬರ್’ ಕೂಗಿ ಭಾರೀ ಪ್ರಶಂಸೆಗೆ ಒಳಗಾಗಿದ್ದ ಮಂಡ್ಯದ ಹಿಜಾಬಿ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮುಸ್ಕಾನ್ ತನ್ನ ಪೋಷಕರೊಂದಿಗೆ ಪವಿತ್ರ ಮಕ್ಕಾ ಯಾತ್ರೆಗೆ ತೆರಳಿದ್ದನ್ನೇ ರಂಪಾಟ ಮಾಡಿರುವ ಕನ್ನಡ ಮಾದ್ಯಮಗಳು, ಪೊಲೀಸರನ್ನು ಯಾಮಾರಿಸಿ ಮುಸ್ಕಾನ್ ಸೌದಿಗೆ ತೆರಳಿದ್ದಾಳೆ ಎಂದು ಸುಳ್ಳು ಸುದ್ದಿ ಹರಡಿಸಿದೆ.

ಈ ಮಧ್ಯೆ ಪಬ್ಲಿಕ್ ಟಿವಿಯ ವೆಬ್ ಸೈಟ್ ನಲ್ಲಿ ಪೊಲೀಸರನ್ನ ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿ ಎಂಬ ಸುದ್ದಿಯನ್ನು ಪ್ರಸಾರ ಮಾಡಿದೆ. ಆದರೆ ಈ ಬಗ್ಗೆ ಪ್ರತಿಕ್ರಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಮುಸ್ಕಾನ್ ವಿದೇಶಕ್ಕೆ ಪ್ರಯಾಣಕ್ಕೆ ಪೊಲೀಸರ ಅನುಮತಿ ಪಡೆಯುವ ಅಗತ್ಯವಿಲ್ಲ. ಕಾರಣ ಆಕೆಯ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

- Advertisement -

ಇನ್ನು ಪಬ್ಲಿಕ್ ಟಿವಿ ಅಷ್ಟೇ ಅಲ್ಲದೆ ಕೆಲವೊಂದು ಕನ್ನಡ ಮಾಧ್ಯಮಗಳು ಮನ ಬಂದಂತೆ ತಮ್ಮದೇ ಧಾಟಿಯ ಶೀರ್ಷಿಕೆ ನೀಡಿ ಮುಸ್ಕಾನ್ ಮಾನಾಹರಣ ನಡೆಸಲು ಪ್ರಯತ್ನಿಸಿದೆ. ಮುಸ್ಕಾರ್ ತನ್ನ ಕುಟುಂಬದ ಸದಸ್ಯರೊಂದಿಗೆ ಏಪ್ರಿಲ್ 25 ರಂದು ಉಮ್ರಾ ಯಾತ್ರೆಗೆ ತೆರಳಿದ್ದರು. ಇದನ್ನೇ ಕಾರಣವಾಗಿಟ್ಟ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ವರದಿ ಮಾಡಿದೆ.



Join Whatsapp