►► ಸಾಕುಪ್ರಾಣಿಗಳ ಬೃಹತ್ ದತ್ತು ಸ್ವೀಕಾರ ಅಭಿಯಾನ
ಬೆಂಗಳೂರು: ಸಾಕುಪ್ರಾಣಿ ಪ್ರಿಯರಿಂದ ಸಾಕುಪ್ರಾಣಿಗಳ ಪ್ರೇಮಿಗಳ ಸಮ್ಮಿಲನವಾದ ವಿಸ್ಕಾಸ್ ಮತ್ತು ಫೆಲೈನ್ ಕ್ಲಬ್ ಆಫ್ ಇಂಡಿಯಾ ಸಹಯೋಗದಲ್ಲಿ ಸಾಕುಪ್ರಾಣಿಗಳ ಪ್ರದರ್ಶನ ಪೆಟ್ ಗಲಾ ಜೂನ್ 12ರಂದು ಜಯಮಹಲ್ ಅರಮನೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ.
ಫೆಲೈನ್ ಕ್ಲಬ್ ಆಫ್ ಇಂಡಿಯಾ (FCI), ಸಾಕುಪ್ರಾಣಿಗಳ ಆಹಾರ ಮತ್ತು ಪೌಷ್ಟಿಕಾಂಶದಲ್ಲಿ ಅಗ್ರಗಣ್ಯ ಮಾರ್ಸ್ ಪೆಟ್ಕೇನ ಬಾಂಡ್ ಎಸ್ಟಾಸ್ನ ಸಹಭಾಗಿತ್ವದಲ್ಲಿ ಕ್ಯಾಟ್ ಶೋ (ಬೆಕ್ಕು ಪ್ರದರ್ಶನ)ವನ್ನು ಇಬ್ಬರು ಅಂತಾರಾಷ್ಟ್ರೀಯ ತೀರ್ಪುಗಾರರ ಮುಂದೆ ಆಯೋಜಿಸಲಿದೆ. ಪ್ರದರ್ಶನದಲ್ಲಿ 200ಕ್ಕೂ ಹೆಚ್ಚು ಬೆಕ್ಕುಗಳು ಭಾಗವಹಿಸಲಿವೆ ಎಂದು ಫೆಲೈನ್ ಕ್ಲಬ್ ಆಫ್ ಇಂಡಿಯಾ ಅಧ್ಯಕ್ಷ ಸಾಕಿಬ್ ಪಠಾಣ್ ತಿಳಿಸಿದ್ದಾರೆ. ಪರ್ಷಿಯನ್. ಮೈನೆ ಕೂನ್, ಬೆಂಗಾಲ್ ಮತ್ತು ಭಾರತೀಯ ತಳಿ, ಇಂಡಿಮ್ ಮುಂತಾದ ವಿವಿಧ ತಳಿಗಳ ಬೆಕ್ಕುಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ.
ಜೂ. 12ರಂದು ಪೆಟ್ಕೇರ್, ಸಾಕುಪ್ರಾಣಿಗಳ ಬೃಹತ್ ದತ್ತು ಸ್ವೀಕಾರ ಅಭಿಯಾನವನ್ನು ಆಯೋಜಿಸಿದೆ. ಅಭಿಯಾನವು ಸಾಧ್ಯವಾದಷ್ಟು ಇಂಡಿಮ್ ತಳಿಯ ಬೆಕ್ಕುಗಳನ್ನು ನೋಡಿಕೊಳ್ಳುವ, ಸ್ವಾಗತಿಸುವ ಮತ್ತು ಅವುಗಳಿಗೆ ಉತ್ತಮ ಆರೈಕೆ ಮಾಡುವವರ ಕೈಗೆ ಒದಗಿಸುವ ಗುರಿಯನ್ನು ಹೊಂದಿದೆ. ಸಾಕುಪ್ರಾಣಿಗಳಿಗಾಗಿ ಉತ್ತಮ ಜಗತ್ತನ್ನು ಸೃಷ್ಟಿಸುವುದು ನಮ್ಮ ಉದ್ದೇಶವಾಗಿದೆ. ಎಫ್ ಸಿಐ ಮತ್ತು ಪೆಟ್ ಲಾ ಜೊತೆಗಿನ ಸಂಬಂಧವು ಹಲವಾರು ಪ್ರಯತ್ನಗಳಲ್ಲಿ ಒಂದಾಗಿದೆ. ಇದರ ಮೂಲಕ ನಾವು ಸಾಕುಪಾಣಿಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ಅವುಗಳನ್ನು ದತ್ತು ತೆಗೆದುಕೊಂಡು ಪ್ರೀತಿಯಿಂದ ಸಾಕುವ ಗುರಿಯನ್ನು ಹೊಂದಿದ್ದೇವೆ. ನಗರಗಳಲ್ಲಿ ಸಾಕುಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಳ್ಳುವ ಅರಿವು ಮೂಡಿಸುತ್ತೇವೆ. ಸಾಕುಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಳ್ಳುವವರಿಗೆ ಪ್ರಾಣಿಗಳನ್ನು ನೀಡಿ ಅವುಗಳು ಉತ್ತಮ ಆರೈಕೆಯಲ್ಲಿ ಬೆಳೆಯುವುದು ಕೂಡ ನಮ್ಮ ಉದ್ದೇಶವಾಗಿದ್ದು, ಇದರಲ್ಲಿ ನಾವು ಸಾಧಿಸುತ್ತೇವೆ ಎಂಬ ಭಾವನೆ ನಮ್ಮದು ಎಂದು ಮಾರ್ಸ್ ಪೆಟ್ ಕೇರ್ ವ್ಯವಸ್ಥಾಪಕ ನಿರ್ದೇಶಕ ಸಲಿಲ್ ಮೂರ್ತಿ ಹೇಳುತ್ತಾರೆ.
ಸಾಕು ನಾಯಿಗಳ ಚುರುಕುತನ ವಲಯ, ಪೂಲ್ ಪಾರ್ಟಿ, ಪಿಇಟಿ ಫ್ಯಾಶನ್ ಶೋ, ಸಂವಾದಾತ್ಮಕ ಆಟಗಳು, ಲೈವ್ ಸಂಗೀತ ಹೀಗೆ ಸಾಕುಪ್ರಾಣಿ ಪ್ರಿಯರಿಗೆ ಪೆಟ್ ಗಾಲಾ ಶೋನಲ್ಲಿ ಅನೇಕ ಆಸಕ್ತಿಕರ ಚಟುವಟಿಕೆಗಳು ಇರುತ್ತವೆ. ನಮ್ಮ ಸ್ಥಳೀಯ ಭಾರತೀಯ ಶ್ವಾನ ತಳಿಗಳನ್ನು ಜನರು ನೋಡಬಹುದಾದ ವಿಶೇಷ ವಲಯಗಳು ಪ್ರದರ್ಶನದ ವಿಶೇಷತೆಯಾಗಿದೆ. ಇದು ಅಂತರಾಷ್ಟ್ರೀಯ ಯುಟಿಲಿಟಿ ಡಾಗ್ ಸೋರ್ಟ್ಸ್’ (IGP) ನ ಮೊದಲ ಪದರ್ಶನ ಎಂದು ಪೆಟ್ಗಳಾದ ಕಾರ್ಯಕ್ರಮ ನಿರ್ದೇಶಕ ಎಸ್ ಕಿರಣ್ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ 9844006736 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.