ಅಮೆರಿಕದಲ್ಲಿ 195 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಭಾರತೀಯರ ವೀಸಾ ಸಮಸ್ಯೆ

Prasthutha|

ವಾಷಿಂಗ್ಟನ್: ಸಾಕಷ್ಟು ಮಂದಿ ಭಾರತೀಯರು ಅಮೆರಿಕದಲ್ಲಿ ತಾತ್ಕಾಲಿಕ ವೀಸಾದೊಡನೆ ಕೆಲಸ ಮಾಡುತ್ತಿದ್ದಾರೆ. ಕೆಲಸ ಕೊಟ್ಟವರು ಕೂಡ ಅವರ ವೀಸಾ ಖಾಯಮಾತಿಗೆ ಯಾವುದೇ ಮಾರ್ಗದರ್ಶನ ಮಾಡದಿರುವುದರಿಂದ ಸಾಕಷ್ಟು ಮಂದಿ ದೇಶಕ್ಕೆ ಹಿಂದಿರುಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

- Advertisement -


ಟೆಕ್ ಕೈಗಾರಿಕೆಯು ಬಹುತೇಕ ಎಚ್- 1ಬಿ ವೀಸಾವನ್ನೇ ಅವಲಂಬಿಸಿದೆ. ಅಮೆಜಾನ್, ಮೇಟಾ, ಲೈಫ್ಟ್, ಸೇಲ್ಸ್ ಫೋರ್ಸ್, ಸ್ಟ್ರೈಪ್, ಟ್ವಿಟರ್ 45,000 ಜನರಿಗೆ ಕಡಿಮೆ ಇಲ್ಲದಂತೆ ಎಚ್- 1ಬಿ ವೀಸಾದಡಿ ಕೆಲಸ ನೀಡಿವೆ. ಇದು ಬ್ಲೂಂಬರ್ಗ್ ವಿಶ್ಲೇಷಣೆಯ ಮಾಹಿತಿಯಾಗಿದೆ. ಮೇಟಾ ಮತ್ತು ಟ್ವಿಟರ್’ಗಳು ಉದ್ಯೋಗಕ್ಕೆ ಕತ್ತರಿ ಹಾಕುತ್ತಿರುವುದರಿಂದ ಈಗಾಗಲೇ 350 ಮಂದಿ ವಲಸೆಗಾರರು ಕೆಲಸ ಕಳೆದುಕೊಂಡಿದ್ದಾರೆ.


ಎಚ್-1ಬಿ ವೀಸಾದವರು ಕೆಲಸ ಕಳೆದುಕೊಂಡು 60 ದಿನಕ್ಕಿಂತ ಹೆಚ್ಚು ಕಾಲ ಅಮೆರಿಕದಲ್ಲಿ ಉಳಿಯಲು ಅವಕಾಶವಿಲ್ಲ. ಬಹಳಷ್ಟು ಮಂದಿ ಕಾಯಂ ಪೌರತ್ವಕ್ಕೆ ಅರ್ಜಿ ಹಾಕಿದ್ದಾರೆ. ಕೆಲವರ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ, ಕೆಲವರು ಅಡಮಾನ ಮಾಡಿದವರು ಇದ್ದಾರೆ, ಕೆಲವರು ಶಿಕ್ಷಣ ಸಾಲ ಪಡೆದವರು ಇದ್ದಾರೆ. ಖಾಯಂ ಪೌರತ್ವ, ಉದ್ಯೋಗ ಎರಡೂ ದೊಡ್ಡ ಸಮಸ್ಯೆಯಾಗಿದೆ.

- Advertisement -


ಕೆಲಸ ಹುಡುಕಾಟ ಅಮೆರಿಕದಾಚೆವರೆಗೆ ಈಗ ವ್ಯಾಪಿಸಿದೆ. ಇತ್ತೀಚೆಗೆ ಕೆಲಸ ಕಳೆದುಕೊಂಡ ಕೆಲವರು, ಹಿಂದಿನ ಸಂಸ್ಥೆಯನ್ನು ಟೀಕಿಸುವುದು ಬಿಟ್ಟು ಇನ್ನೇನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಟ್ವಿಟರ್ ವಿನ್ಯಾಸಕಾರರೊಬ್ಬರು 14 ವರ್ಷದಿಂದ ಯುಎಸ್’ಎನಲ್ಲಿ ಇದ್ದರೂ ಈಗ ಕೆಲಸವೂ ಇಲ್ಲ, ಆ ದೇಶದ ಪೌರತ್ವವೂ ಇಲ್ಲದೆ ಒದ್ದಾಟಕ್ಕೆ ಬಿದ್ದಿದ್ದಾರೆ. ಹೀಗಾಗುವ ಭಾರತೀಯರ ಸಂಖ್ಯೆ ಈ ವರ್ಷಾಂತ್ಯಕ್ಕೆ 3,500ಕ್ಕೆ ಏರುವ ಸಾಧ್ಯತೆ ಇದೆ ಎನ್ನಲಾಗಿದೆ.


ಎಚ್- 1ಬಿ ವೀಸಾ ಮೂರು ವರ್ಷಕ್ಕೆ ನೀಡಲಾಗುತ್ತದೆ. ಪ್ರತಿ ವರ್ಷ ಯುಎಸ್’ಎ ಸರಕಾರವು 85,000 ಎಚ್- 1ಬಿ ವೀಸಾ ನೀಡುತ್ತದೆ. ಇವರೆಲ್ಲ ಸರಾಸರಿ ಒಂದೂಕಾಲು ಲಕ್ಷ ಸಂಬಳ ಪಡೆಯುವವರು. ಬೋನಸ್ ಇತ್ಯಾದಿಯೂ ಇರುತ್ತದೆ.


ಆದರೆ ಪೌರತ್ವ. ಅಮೆರಿಕದ ಪೌರತ್ವ ಕೋರಿ ಅರ್ಜಿ ಸಲ್ಲಿಸಿರುವ ಭಾರತೀಯರ ಸಂಖ್ಯೆ 5 ಲಕ್ಷಕ್ಕೂ ಹೆಚ್ಚು. ಆದರೆ ವರ್ಷಕ್ಕೆ 10,000 ಮಂದಿಗೆ ಮಾತ್ರ ಯುಎಸ್’ಎ ಪೌರತ್ವ ದೊರೆಯುತ್ತದೆ. ಅಂದರೆ ಇತ್ತೀಚೆಗೆ ಅಮೆರಿಕದ ಪೌರತ್ವಕ್ಕೆ ಅರ್ಜಿ ಹಾಕಿದವರು ಅದನ್ನು ಪಡೆಯಲು ಇನ್ನೂ 195 ವರ್ಷ ಕಾಯಬೇಕು. ಆದರೆ ಚೀನೀ ಕೆಲಸಗಾರರು ಕಾಯಬೇಕಾದ ವರ್ಷ 18 ಮಾತ್ರ ಎಂದರೆ ಭಾರತೀಯ ಕೆಲಸಗಾರರ ವಲಸೆ ಹೇಗಿದೆ ಎಂದು ತಿಳಿಯಬಹುದು.


15 ವರ್ಷಗಳಿಂದ ಅಮೆರಿಕದಲ್ಲಿರುವ ತಂದೆಯೊಬ್ಬರು ಹೊಸದಾಗಿ ಪ್ರೋಗ್ರಾಂ ಮ್ಯಾನೇಜರ್ ಕೆಲಸದ ಹುಡುಕಾಟದಲ್ಲಿದ್ದಾರೆ. ಬಹಳಷ್ಟು ಜನ ಮೂರು ವರ್ಷ ಬಹಳಷ್ಟು ಸಂಬಳ ಪಡೆದು ಮತ್ತೆ ಕೆಲವು ದಿನದಲ್ಲಿ ಹೊಸ ಕೆಲಸದ ಹುಡುಕಾಟದಲ್ಲಿ ಖಾಲಿ ಕೈ ಆಗುವುದೂ ಇದೆ. 15 ವರ್ಷ ಅಲ್ಲಿದ್ದರೂ ಮತ್ತೂ ವಾಸ ನಿಯಮಾವಳಿಯ ಕೊಕ್ಕೆಯಲ್ಲೇ ಇರಬೇಕಾಗುತ್ತದೆ.

ಕೆಲಸ ಕೊಟ್ಟ ಕಂಪೆನಿಗಳು ಎಚ್- 1ಬಿ ವೀಸಾದವರು ಅವರ ತಾಯ್ನಾಡಿಗೆ ಹೋಗಲು ಬಯಸಿದರೆ ಕಂಪೆನಿಗಳು ಅದರ ವೆಚ್ಚವನ್ನು ನೀಡುತ್ತವೆ. ಆದರೆ ಕೆಲವರು ಮಾತ್ರ ಅವರದೇ ಕಂಪೆನಿಯ ಈ ದೇಶದ ಶಾಖೆಯ ಕೆಲಸಗಾರರಾಗಿ ಮುಂದುವರಿಯಲವಕಾಶವಿದೆ. ಮೇಟಾದ ಸಿಇಓ ಮಾರ್ಕ್ ಜುಕರ್ ಬರ್ಗ್ ಈ ವರ್ಷ 11,000 ಕೆಲಸ ಕಟ್ ಎಂದಿದ್ದಾರೆ. ಅದರಲ್ಲಿ 500ಕ್ಕೂ ಅಧಿಕ ಭಾರತೀಯರು ಇರುತ್ತಾರೆ.

Join Whatsapp