ನವೆಂಬರ್‌ 22ರಂದು ಭಾರತದ ಅಧ್ಯಕ್ಷತೆಯ ಜಿ-20 ನಾಯಕರ ವರ್ಚುವಲ್‌ ಸಭೆ

Prasthutha|

ನವದೆಹಲಿ:  ಭಾರತದ  ಪ್ರಧಾನಿಯ ಅಧ್ಯಕ್ಷತೆಯಲ್ಲಿ ನವೆಂಬರ್ 22 ರಂದು ಜಿ-20 ವರ್ಚುವಲ್‌ ಸಭೆ ನಡೆಯಲು7 ತೀರ್ಮಾನಿಸಲಾಗಿದೆ. ಈ ಸಂಬಂಧವಾಗಿ ಈಗಾಗಲೇ ಜಿ 20 ನಾಯಕರಿಗೆ ಆಹ್ವಾನ ನೀಡಲಾಗಿದೆ.

- Advertisement -

ರಷ್ಯಾ- ಉಕ್ರೇನ್‌ ಯುದ್ಧ, ಇಸ್ರೇಲ್‌- ಹಮಾಸ್‌ ಯುದ್ಧ ಮತ್ತು ಜಾಗತಿಕವಾಗಿ ಎದುರಿಸುತ್ತಿರುವ ಇನ್ನಿತರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.

ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಜಿ20 ಸಭೆಯಲ್ಲಿ ಭಾರತದ ಅಧ್ಯಕ್ಷತೆ ಮುಗಿಯುವ ಮೊದಲು ನವೆಂಬರ್‌ನಲ್ಲಿ ವರ್ಚುವಲ್‌ ಸಭೆ ಮಾಡುವುದಾಗಿ ತೀರ್ಮಾನಿಸಲಾಗಿತ್ತು. ನವೆಂಬರ್’ನಲ್ಲಿ  ವರ್ಚುವಲ್‌ ಸಭೆ  ನಡೆಯಲಿದೆ ಮತ್ತು ಅದಕ್ಕಾಗಿ ಆಹ್ವಾನಗಳನ್ನು ವಿಸ್ತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ  ಕಳೆದ ತಿಂಗಳಲ್ಲಿ ಹೇಳಿದ್ದರು . ಸೆಪ್ಪಂಬರ್ ನಲ್ಲಿ ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯ ಕೊನೆಯಲ್ಲಿ  ಭಾರತವು ತನ್ನ ಗುಂಪಿನ ಅಧ್ಯಕ್ಷತೆಯ ಅಂತ್ಯದ ಮೊದಲು ನಾಯಕರ ವರ್ಚುವಲ್ ಸಭೆಯನ್ನು ನಡೆಸುವುದಾಗಿ ಘೋಷಿಸಿತ್ತು.



Join Whatsapp