ಗುವಾಹಟಿ: ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 67 ರನ್ ಗಳಿಂದ ಶ್ರೀಲಂಕಾವನ್ನು ಸೋಲಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದರಿಂದ ವಿರಾಟ್ ಕೊಹ್ಲಿ ತಮ್ಮ 45 ನೇ ಶತಕದೊಂದಿಗೆ ಮುನ್ನಡೆ ಸಾಧಿಸಿದರು. 374 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ದಸುನ್ ಶನಕಾ ಅಜೇಯ 108 ರನ್ ಗಳಿಸಿ 8 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತು. ಸರಣಿಯ ಎರಡನೇ ಪಂದ್ಯ ಗುರುವಾರ ಕೋಲ್ಕತ್ತಾದಲ್ಲಿ ನಡೆಯಲಿದೆ.
ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ಧ ಭಾರತ, ವಿರಾಟ್ ಕೊಹ್ಲಿ ಶತಕದ ಬೆನ್ನೇರಿ 7 ವಿಕೆಟ್ ನಷ್ಟದಲ್ಲಿ 373 ರನ್‌ಗಳಿಸಿತ್ತು. ಸವಾಲಿನ ಗುರಿ ಬೆನ್ನಟ್ಟುವ ವೇಳೆ 206 ರನ್ ಗಳಿಸುವಷ್ಟರಲ್ಲೇ ಲಂಕಾ 8 ವಿಕೆಟ್ ಕಳೆದುಕೊಂಡಿತ್ತು. ಆದರೆ ಅಂತಿಮ ಒಂಬತ್ತನೇ ವಿಕೆಟ್‌ಗೆ ಕಸುನ್ ರಜಿತ ಜೊತೆ ನಾಯಕ ದಸುನ್ ಶಾನಕ ತೋರಿದ ದಿಟ್ಟ ಹೋರಾಟ, ಪ್ರವಾಸಿ ತಂಡಕ್ಕೆ ಗೆಲುವು ತಂದುಕೊಡದಿದ್ದರೂ, ಹೀನಾಯ ಸೋಲು ತಪ್ಪಿಸಿತ್ತು. ಅಂತಿಮವಾಗಿ ಲಂಕಾ, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 306 ರನ್‌ಗಳಿಸಿ ಇನ್ನಿಂಗ್ಸ್ ಮುಗಿಸಿತು.