►ಪಾಕ್ ಬಗ್ಗೆ ಭಾರತದವ ಈ ರೀತಿ ಹೇಳಿದ್ದಿದ್ದರೆ, ಈಗ ದೇಶದ್ರೋಹಿಯಾಗಿರುತ್ತಿದ್ದ ಎಂದ ನೆಟ್ಟಿಗ
ಪಾಕಿಸ್ತಾನದ ಮಹಿಳಾ ಕ್ರಿಕೆಟ್ ಅಭಿಮಾನಿಯೊಬ್ಬರು, ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೇಲಿನ ತಮ್ಮ ಅಭಿಮಾನವನ್ನು ಅನಾವರಣ ಮಾಡಿದ್ದಾರೆ. ಪಾಕಿಸ್ತಾನಿ ಮಹಿಳಾ ಫ್ಯಾನ್ ಆಡಿರುವ ಮಾತುಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾಕಪ್ ಟೂರ್ನಿಯ ಹೈವೋಲ್ಟೇಜ್ ಕದನಕ್ಕೆ ಕೊಲಂಬೊದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿತ್ತು. ವಿರಾಟ್ ಕೊಹ್ಲಿಯ ಆಟವನ್ನು ನೋಡಲು ಪಾಕಿಸ್ತಾನದಿಂದ ಮಹಿಳಾ ಅಭಿಮಾನಿಯೊಬ್ಬರು ಲಂಕಾಗೆ ಬಂದಿದ್ದಾರೆ. ಪಾಕಿಸ್ತಾನ ಎದುರು ವಿರಾಟ್ ಕೊಹ್ಲಿ ಶತಕ ಸಿಡಿಸಬಹುದು ಎನ್ನುವ ಆಸೆಯಲ್ಲಿ ಲಂಕಾಗೆ ಬಂದಿಳಿದಿದ್ದರು. ಆದರೆ ವಿರಾಟ್ ಕೊಹ್ಲಿ ಬೇಗನೇ ವಿಕೆಟ್ ಒಪ್ಪಿಸಿದ್ದು ಅವರ ಕನಸು ನುಚ್ಚುನೂರಾಗುವಂತೆ ಮಾಡಿದೆ. ಇನ್ನು ಈ ಮಹಿಳಾ ಅಭಿಮಾನಿ ಒಂದು ಕೆನ್ನೆಯ ಮೇಲೆ ಪಾಕಿಸ್ತಾನದ ಧ್ವಜ ಹಾಗೂ ಇನ್ನೊಂದು ಕೆನ್ನೆಯ ಬದಿಯಲ್ಲಿ ಭಾರತದ ಧ್ವಜವನ್ನು ಚಿತ್ರಿಸಿಕೊಂಡು ಮೈದಾನಕ್ಕೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಂದಿದ್ದರು.
ಪಂದ್ಯ ರದ್ದಾದ ಬಳಿಕ ಮಾತನಾಡಿದ ಅವರು, “ನಾನು ವಿರಾಟ್ ಕೊಹ್ಲಿ ಆಟವನ್ನು ನೋಡಲು ಇಲ್ಲಿಗೆ ಬಂದಿದ್ದೇನೆ. ಯಾಕೆಂದರೆ ನಾನು ಅವರ ದೊಡ್ಡ ಅಭಿಮಾನಿ. ನಾನು ಅವರು ಶತಕ ಸಿಡಿಸಬಹುದು ಎಂದು ಬಯಸಿದ್ದೇ, ಆದರೆ ನನ್ನ ಹೃದಯ ಒಡೆದು ಹೋಯಿತು” ಎಂದು ಹೇಳಿದ್ದಾರೆ. ನಾನು ಪಾಕಿಸ್ತಾನವನ್ನು ಬೆಂಬಲಿಸುತ್ತೇನೆ ಹಾಗೂ ಭಾರತವನ್ನೂ ಬೆಂಬಲಿಸುತ್ತೇನೆ” ಎಂದು ಹೇಳಿದಾಗ ಆಕೆಯ ಬಲಬದಿಯಲ್ಲಿದ್ದ ವ್ಯಕ್ತಿ ಮಧ್ಯಪ್ರವೇಶಿಸಿದಾಗ, “ಚಾಚಾ, ನೆರೆಹೊರೆಯವರನ್ನು ಪ್ರೀತಿಸುವುದರಲ್ಲಿ ತಪ್ಪೇನು ಇಲ್ಲ ಅಲ್ವಾ?.
“ಒಂದು ವೇಳೆ ವಿರಾಟ್ ಕೊಹ್ಲಿ ಹಾಗೂ ಬಾಬರ್ ಆಝಂ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂದರೆ ಯಾರನ್ನು ಆಯ್ಕೆ ಮಾಡುತ್ತೀರಿ ಎನ್ನುವ ಪ್ರಶ್ನೆಗೆ ಪಾಕಿಸ್ತಾನದ ಮಹಿಳಾ ಅಭಿಮಾನಿ “ವಿರಾಟ್ ಕೊಹ್ಲಿ” ಎಂದು ಹೇಳಿಕೆ ನೀಡಿದ್ದು, ಸಾಕಷ್ಟು ವೈರಲ್ ಆಗಿದೆ.
A Pakistani baba stops this cute girl from loving Virat Kohli & India but this courageous girl gives a befitting reply to him and continues her support for Virat. Hats off to her.#INDvPAK #PAKvIND pic.twitter.com/9nh1M9FPbW
— Silly Context (@SillyMessiKohli) September 2, 2023
ವಿಡಿಯೋ ವೈರಲ್ ಬಳಿಕ, ಹಲವು ಮಂದಿ ನೆಟ್ಟಿಗರು ಆಕೆಯ ಮಾತುಗಳಿಗೆ ಫಿದಾ ಆಗಿದ್ದಾರೆ. “ಒಂದು ವೇಳೆ ಭಾರತದ ಅಭಿಮಾನಿ ಪಾಕಿಸ್ತಾನದ ಬಗ್ಗೆ ಈ ರೀತಿಯಾಗಿ ಮುಕ್ತವಾಗಿ ಹೇಳಿದ್ದಿದ್ದರೆ ಆತ ಈಗ ದೇಶದ್ರೋಹಿಯಾಗಿರುತ್ತಿದ್ದ” ಎಂದ ನೆಟ್ಟಿಗರೋರ್ವರು ವಿಡಿಯೋ ಹಂಚಿಕೊಂಡು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
If she had been an Indian and had praised a Pakistani player, she would have been called Traitor / anti national
— زماں (@Delhiite_) September 2, 2023
– Perhaps a case of Sedation would also have been filed. pic.twitter.com/Gu7jlGXTB5