ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ಅತಿಹೆಚ್ಚು ರನ್‌ ದಾಖಲಿಸಿದ ವಿರಾಟ್‌ ಕೊಹ್ಲಿ 

Prasthutha|

ಯುಎಇಯಲ್ಲಿ ನಡೆದ ಏಷ್ಯಾಕಪ್‌ ಮತ್ತು ಪ್ರಸಕ್ತ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್‌ ನಿರ್ವಹಣೆ ನೀಡುತ್ತಿರುವ ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.

- Advertisement -

ಅಡಿಲೇಡ್‌ನಲ್ಲಿ ಬುಧವಾರ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ದಾಖಲಿಸಿ ಅಬ್ಬರಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಬಂದ ಕೊಹ್ಲಿ, 44 ಎಸೆತಗಳಲ್ಲಿಅಜೇಯ 64 ರನ್‌ಗಳಿಸಿದ್ದರು. ಕೊಹ್ಲಿ 16 ರನ್‌ ತಲುಪಿದಾಗ, ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ಅತಿಹೆಚ್ಚು ರನ್‌ ದಾಖಲಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡರು.  ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ಅತಿಹೆಚ್ಚು ಅರ್ಧಶತಕಗಳು ಕೊಹ್ಲಿ ಖಾತೆಯಲ್ಲಿದೆ.

ವೃತ್ತಿ ಜೀವನದ ತಮ್ಮ 25ನೇ ಟಿ20 ವಿಶ್ವಕಪ್‌ ಪಂದ್ಯದಲ್ಲಿ (23ನೇ ಇನ್ನಿಂಗ್ಸ್‌) ಕೊಹ್ಲಿ, 88.75ರ ಸರಾಸರಿಯಲ್ಲಿ 1,065 ರನ್ ಗಳಿಸಿದ್ದಾರೆ. ಆ ಮೂಲಕ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ (1,016 ರನ್‌, 31 ಪಂದ್ಯ) ಸಾಧನೆಯನ್ನು ಟೀಮ್‌ ಇಂಡಿಯಾದ ಮಾಜಿ ನಾಯಕ ಹಿಂದಿಕ್ಕಿದ್ದಾರೆ.  33 ಪಂದ್ಯಗಳಲ್ಲಿ965 ರನ್‌ಗಳಿಸಿರುವ ಕ್ರಿಸ್ ಗೇಲ್ ಮೂರನೇ ಮತ್ತು 921 ರನ್‌ಗಳೊಂದಿಗೆ ಟೀಮ್‌ ಇಂಡಿಯಾದ ನಾಯಕ ರೋಹಿತ್ ಶರ್ಮಾ 4ನೇ ಸ್ಥಾನದಲ್ಲಿದ್ದಾರೆ.

- Advertisement -

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಇದುವರೆಗೂ 4 ಪಂದ್ಯಗಳನ್ನಾಡಿರುವ ಕೊಹ್ಲಿ, 3 ಅರ್ಧಶತಕಗಳನ್ನೊಳಗೊಂಡಂತೆ 220 ರನ್‌ಗಳಿಸಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 82 ರನ್‌ಗಳಿಸಿದ್ದ ಕೊಹ್ಲಿ, ಗೆಲುವಿನ ರುವಾರಿಯಾಗಿದ್ದರು.  2012ರಲ್ಲಿ ಟಿ20 ವಿಶ್ವಕಪ್‌ನಲ್ಲಿ 185 ರನ್ ಗಳಿಸಿದ್ದ ಕೊಹ್ಲಿ, 2014ರ ಟಿ20 ವಿಶ್ವಕಪ್‌ನಲ್ಲಿ ಟಾಪ್‌ ಸ್ಕೋರರ್‌ ಆಗಿದ್ದರು. 2016ರಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿದ್ದರು. ಕೊಹ್ಲಿ 2014 ಮತ್ತು 2016 ರಲ್ಲಿ ಪಂದ್ಯಾಕೂಟದ ಶ್ರೇಷ್ಟ ಆಟಗಾರ ಪ್ರಶಸ್ತಿ ಕೊಹ್ಲಿ ಪಾಲಾಗಿತ್ತು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ ಗರಿಷ್ಠ ರನ್‌ ಸರದಾರ ದಾಖಲೆ ಕೊಹ್ಲಿ ಹೆಸರಿನಲ್ಲಿದೆ.



Join Whatsapp