ವಿನೇಶ್ ಅವರ ಸ್ಥೈರ್ಯ, ಅರ್ಪಣಾ ಮನೋಭಾವ ಸದಾ ದೇಶವನ್ನು ಪ್ರೇರೆಪಿಸುತ್ತದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Prasthutha|

ಬೆಂಗಳೂರು: ವಿನೇಶ್ ಫೋಗಟ್ ಅವರ ಸ್ಥೈರ್ಯ, ಪುಟಿದೇಳಬಲ್ಲ ಗುಣ ಹಾಗೂ ಅರ್ಪಣಾ ಮನೋಭಾವ ಸದಾ ದೇಶವನ್ನು ಪ್ರೇರೆಪಿಸುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡಿರುವುದು ನಿಜಕ್ಕೂ ದುರದೃಷ್ಟಕರ. ವಿನೇಶಾ ಅವರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ವಿನೇಶ್ ಅವರ ಸ್ಥೈರ್ಯ, ಪುಟಿದೇಳಬಲ್ಲ ಗುಣ ಹಾಗೂ ಅರ್ಪಣಾ ಮನೋಭಾವ ಸದಾ ದೇಶವನ್ನು ಪ್ರೇರೆಪಿಸುತ್ತದೆ’ ಎಂದು ಹೇಳಿದ್ದಾರೆ.


‘ನೆನಪಿಡಿ, ಈ ಒಂದು ಕ್ಷಣದಿಂದಾಗಿ ನೀವು ದೇಶಕ್ಕಾಗಿ ಮಾಡಿದ ಅಪಾರ ಸಾಧನೆ ಹಾಗೂ ಹೆಮ್ಮೆಯನ್ನು ಕುಗ್ಗಿಸಲು ಸಾಧ್ಯವಿಲ್ಲ. ಧೈರ್ಯವಾಗಿರು ವಿನೇಶಾ, ನಿಮ್ಮ ಮೇಲೆ ಹಾಗೂ ನಿಮ್ಮ ಅದ್ಭುತ ಪಯಣದಲ್ಲಿ ನಮಗೆ ನಂಬಿಕೆಯಿದೆ. ನೀವು ಎಂದೆಂದಿಗೂ ದೇಶದ ಚಾಂಪಿಯನ್’ ಎಂದು ಬರೆದುಕೊಂಡಿದ್ದಾರೆ.

- Advertisement -


ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ತೂಕ ಹೆಚ್ಚಿದ ಹಿನ್ನೆಲೆಯಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ. ಇದರಿಂದಾಗಿ ಭಾರತಕ್ಕೆ ಪದಕ ನಷ್ಟವಾಗಿದೆ.



Join Whatsapp