ಒಲಿಂಪಿಕ್ಸ್ ಫೈನಲ್ಸ್‌ನಿಂದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡಿದ್ದರು. ಬೆಳ್ಳಿ ಪದಕಕ್ಕೆ ಪರಿಗಣಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ ವಜಾಗೊಳಿಸಿದೆ.
ಅನರ್ಹತೆ ಪ್ರಶ್ನಿಸಿ, ಬೆಳ್ಳಿ ಪದಕಕ್ಕೆ ಪರಿಗಣಿಸುವಂತೆ ಕೋರಿ ಇತ್ತೀಚೆಗೆ ವಿನೇಶ್ ಫೋಗಟ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇಂದು ವಾದ, ಪ್ರತಿವಾದ ಆಲಿಸಿದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ.
ಸೆಮಿಫೈನಲ್ವರೆಗೂ ಕಟ್ಟುನಿಟ್ಟಾಗಿ ನಿಯಮ ಪಾಲಿಸಿ ಗೆದ್ದಿದ್ದ ವಿನೇಶ್, ಫೈನಲ್ಗೆ ಲಗ್ಗೆ ಇಟ್ಟಿದ್ದರು. ಆದರೆ ಕೇವಲ 100 ಗ್ರಾಂ ತೂಕ ಹೆಚ್ಚಾಗಿರೋದ್ರಿಂದ ಫೈನಲ್ನಿಂದ ಅನರ್ಹಗೊಳಿಸಲಾಗಿತ್ತು. ಫೈನಲ್ನಲ್ಲಿ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಕೋರ್ಟ್ ಆಫ್ ಆರ್ಬಿಟ್ರೇಶನ್ನಲ್ಲಿ ವಿನೇಶ್ ಫೋಗಟ್ ಅರ್ಜಿ ಸಲ್ಲಿಸಿದ್ದರು. ತನಗೆ ಕನಿಷ್ಠ ಬೆಳ್ಳಿ ಪದಕವನ್ನಾದ್ರೂ ನೀಡುವಂತೆ ಒತ್ತಾಯಿಸಿದ್ದರು