ಪ್ಯಾರಿಸ್ ಒಲಿಂಪಿಕ್ಸ್: ವಿನೇಶ್‌ ಫೋಗಟ್‌ ಫೈನಲ್‌ಗೆ ಲಗ್ಗೆ

Prasthutha|

- Advertisement -

ಒಲಿಂಪಿಕ್ಸ್‌’ನಲ್ಲಿ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು

ಪ್ಯಾರಿಸ್: ಮಹಿಳೆಯರ ಪ್ರೀಸ್ಟೈಲ್‌ 50 ಕೆಜಿ ಸೆಮಿಫೈನಲ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ ಭಾರತದ ಕುಸ್ತಿಪಟು ವಿನೇಶ್‌ ಫೋಗಟ್‌ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಆ ಮೂಲಕ ಒಲಿಂಪಿಕ್ಸ್‌ ಪದಕ ಗೆಲ್ಲುವುದನ್ನು ಖಚಿತಪಡಿಸಿಕೊಂಡಿದ್ದಾರೆ.

- Advertisement -

ಮಂಗಳವಾರ ನಡೆದ ಕುಸ್ತಿ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸಿ ಒಲಿಂಪಿಕ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಫೋಗಟ್ ಪಾತ್ರರಾಗಿದ್ದಾರೆ.

ಫೋಗಾಟ್ ಕೊನೆಯ-ಎಂಟನೇ ಹಂತದಲ್ಲಿ ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರನ್ನು ಸೋಲಿಸಿದರು. ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಮತ್ತು ಹಾಲಿ ಚಿನ್ನದ ಪದಕ ವಿಜೇತ ಜಪಾನ್‌ನ ಯುಯಿ ಸುಸಾಕಿ ಅವರನ್ನೂ ಮಣಿಸಿದ್ದಾರೆ.



Join Whatsapp