2ಡಿ ಮೀಸಲಾತಿ ಅವೈಜ್ಞಾನಿಕ, ಅಸಾಂಪ್ರದಾಯಿಕ: ಮಾಜಿ ಸಚಿವ ವಿನಯ್ ಕುಲಕರ್ಣಿ

Prasthutha|

►’ಪಂಚಮಸಾಲಿ ಸಮುದಾಯಕ್ಕೆ ಇನ್ನೊಬ್ಬರ ಮೀಸಲಾತಿ ತೆಗೆದು ಕೊಡುವ ಅವಶ್ಯಕತೆ ಇರಲಿಲ್ಲ’

ಬೆಳಗಾವಿ: ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2D ಮೀಸಲಾತಿ ಘೋಷಣೆ ವಿಚಾರಕ್ಕೆ ಸಂಬಂಧಿಸಿ ಮುಂಬರುವ ಚುನಾವಣೆ ಸಲುವಾಗಿ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ.

- Advertisement -

2ಡಿ ಮೀಸಲಾತಿ ಅವೈಜ್ಞಾನಿಕ, ಅಸಾಂಪ್ರದಾಯಿಕವಾಗಿದೆ. ಪಂಚಮಸಾಲಿ ಸಮುದಾಯಕ್ಕೆ 17% ಮೀಸಲಾತಿ ಕೇಳಿದ್ದೆವು. ಇನ್ನೊಬ್ಬರ ಮೀಸಲಾತಿ ತೆಗೆದು ಕೊಡುವ ಅವಶ್ಯಕತೆ ಇರಲಿಲ್ಲ. ಕರ್ನಾಟಕದಲ್ಲಿ ಲಿಂಗಾಯತ ಸಮಾಜ ಒಟ್ಟು 24.6 ಪರ್ಸೆಂಟ್ ಇದ್ದರು. ಲಿಂಗಾಯತ ಹೂಗಾರ್, ಲಿಂಗಾಯತ ಕಂಬಾರ ಸೇರಿ ಅನೇಕ ಉಪಜಾತಿಗಳಿವೆ. ಆದ್ರೆ ಹೂಗಾರ್, ಗಾಣಿಗೆರ್ ಅಂತ ಇದ್ರೆ ಮಾತ್ರ 2ಎ ಮೀಸಲಾತಿ ಕೊಡ್ತೀವಿ ಅಂದಿದ್ದರು. ನಮ್ಮ ಸಮಾಜ ಬೇರೆ ಸಮಾಜದ ಮಧ್ಯ ಬೆಂಕಿ ಹಚ್ಚುವ ಕೆಲಸ ಸರ್ಕಾರ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೊಬ್ಬರ ಮೀಸಲಾತಿ ತೆಗೆದು ನಮಗೆ ಕೊಡುವ ಅವಶ್ಯಕತೆ ಇರಲಿಲ್ಲ. ಇವತ್ತೂ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ.
ಈ ಮೀಸಲಾತಿ ನಮಗೆ ಯಾರಿಗೂ ಸಮಾಧಾನ ತಂದಿಲ್ಲ 2 ಪರ್ಸೆಂಟ್ ಮೀಸಲಾತಿಯಿಂದ ನಮಗೆ ಏನು ಸಿಗಲ್ಲ. ಸಮಾಜಕ್ಕೆ ಇದರಿಂದ ಏನೂ ದೊಡ್ಡ ಲಾಭ ಆಗಿಲ್ಲ. ಮುಂಬರುವ ಚುನಾವಣೆ ತಂತ್ರಗಾರಿಕೆಯಿಂದ ಈ ವ್ಯವಸ್ಥೆ ಮಾಡಿದ್ದಾರೆ ಎಂದು ಕುಲಕರ್ಣಿ ಆರೋಪಿಸಿದ್ದಾರೆ.

- Advertisement -