ಶಾಸಕ ಸಿ.ಟಿ.ರವಿ ಕ್ಷೇತ್ರದಲ್ಲಿ ಮತದಾರರಿಗೆ ಹಂಚಿದ್ದ ಸೀರೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

Prasthutha|

ಚಿಕ್ಕಮಗಳೂರು: ಶಾಸಕ ಸಿ.ಟಿ.ರವಿ ಪ್ರತಿನಿಧಿಸುವ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಮನೆಗೆ ವಿತರಿಸಿದ್ದು, ಗ್ರಾಮಸ್ಥರೊಬ್ಬರು ಸೀರೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -


ಭಕ್ತರಹಳ್ಳಿಯಲ್ಲಿ ಗ್ರಾಮಸ್ಥರೊಬ್ಬರು ಬಿಜೆಪಿ ವಿತರಿಸಿದ ಸೀರೆಗೆ ಬೆಂಕಿ ಹೊತ್ತಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ವೋಟು ಹಾಕಿ ಗೆಲ್ಲಿಸಿದ್ದೇವೆ, ಊರಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ನನ್ನ ಹೆಂಡತಿ, ತಾಯಿಗೆ ಸೀರೆ ಕೊಟ್ಟಿದ್ದಾರೆ. ಇದೇ ನಮಗೆ ನೀಡಿರುವ ಸೌಲಭ್ಯ. ಈ ಸೌಲಭ್ಯ ಬಿಟ್ಟರೆ ಬೇರೆ ಏನೂ ಕೊಟ್ಟಿಲ್ಲ ಎಂದು ಗ್ರಾಮಸ್ಥ ಯೋಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp