ಹಲಗೂರು: ರಾಜ್ಯದಲ್ಲಿ ಸಚಿವರ ಗೂಂಡಾ ಘರ್ಜನೆ ಜಾಸ್ತಿ ಆಗುತ್ತಿದೆ ಎಂದು ಕುಮಾರಸ್ವಾಮಿ ಜಾಸ್ತಿ ಸೌಂಡ್ ಮಾಡುತ್ತಿದ್ದಾರೆ ಅಂತ ವಿಜಯೇಂದ್ರ ಕೂಡ ಸಾತ್ ಕೊಡುತ್ತಿದ್ದಾರೆ ಎಂದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ವಿಜಯೇಂದ್ರ ಇನ್ನೂ ಮಗು. ಪಾಪ ಅವರ ತಂದೆ ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ ರಾಜ್ಯದ ವಿಚಾರ ತಿಳಿದುಕೊಂಡಿದ್ದೀನಿ. ಒಂದು ಪಕ್ಷದ ಅಧ್ಯಕ್ಷರಾಗಿ ಯಾವ ಪದ ಬಳಕೆ ಮಾಡಬೇಕು ಎನ್ನುವ ಸಂಯಮ ಇಲ್ಲ ಅವರಿಗೆ ಇಲ್ಲ ಎಂದು ಹೇಳಿದ್ದಾರೆ.
ನಾವು ಕೂಡ ಅವರಿಗಿಂತ ಹೆಚ್ಚು ಮಾತಾನಾಡುತ್ತೇವೆ. ನಾವು ಗ್ರಾಮೀಣ ಪ್ರದೇಶದಿಂದ ಬಂದಿರೋದು. ನಮಗೂ ಭಾಷೆ ಗೊತ್ತಿದೆ. ಯಾವ ಭಾಷೆ ಬಳಸಬೇಕು ಅಂತ ಗೊತ್ತಿದೆ. ಆದರೆ ನಮ್ಮ ನಾಲಿಗೆ ಹಿಡಿತದಲ್ಲಿ ಇರಬೇಕು ಸುಮ್ಮನಿದ್ದೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರಗೆ ಸ್ವ-ಪಕ್ಷದಲ್ಲೇ ಅವರನ್ನು ಅಧ್ಯಕ್ಷರಾಗಿ ಒಪ್ಪಲು ಯಾರು ತಯಾರಿಲ್ಲ. ನಾಯಕರ ಮನೆ ಮನೆಗೆ ಹೋಗಿ ಸಮಾಧಾನ ಪಡಿಸುವ ಪ್ರೊಗ್ರಾಮ್ ಇಟ್ಮೊಂಡಿದ್ದಾರೆ ಎಂದರು.
ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಸಚಿವರು, ರಾಜ್ಯದ ಜವಾಬ್ದಾರಿ ಮತ್ತು ಜನರ ಸಮಸ್ಯೆ ಅವರಿಗೆ ಮುಖ್ಯವಲ್ಲ. ಜನರ ಸಮಸ್ಯೆ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಕಳೆದ ಎರಡು ಮೂರು ತಿಂಗಳಿಂದ ನಾಲಿಗೆಯಲ್ಲಿ ಹಿಡಿತ ಇಲ್ಲದೆ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.