ಮಂಡ್ಯ: ಮುಸ್ಲಿಮರ ನರಮೇಧಕ್ಕೆ ಕರೆಕೊಟ್ಟ ಘಟನೆಗೆ ಸಂಬಂಧಿಸಿದಂತೆ ಎಬಿವಿಪಿ ಮುಖಂಡೆ ಪೂಜಾ ವಿರುದ್ಧ ವಿಜಯಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮುಸ್ಲಿಮರ ಅದರಲ್ಲೂ ಪ್ರತ್ಯೇಕವಾಗಿ ಹಿಜಾಬ್ ಧರಿಸಲು ಹೋರಾಡುತ್ತಿರುವ ಆರು ವಿದ್ಯಾರ್ಥಿಯರ ವಿರುದ್ಧ ಬಹಿರಂಗವಾಗಿ ಹಿಂಸೆಗೆ ಕರೆ ಕೊಡಲಾಗಿತ್ತು. ಇದರೊಂದಿಗೆ 60, 000 ಮುಸ್ಲಿಮರ ಹತ್ಯೆ ನಡೆಸುವುದಾಗಿ ಪೂಜಾ ಹೇಳಿಕೆ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಸದ್ಯ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪೂಜಾ ವಿರುದ್ಧ ಐಪಿಸ್ ಸೆಕ್ಷನ್ 295 ಎ, 504, 506 ಸೇರಿದಂತೆ ಹಲವಾರು ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ್ ಕುಮಾರ್ ತಿಳಿಸಿದ್ದಾರೆ.
ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಹರ್ಷ ಎಂಬಾತನ ಕೊಲೆಯನ್ನು ಖಂಡಿಸಿ ಬಜರಂಗದಳ, ವಿ.ಎಚ್.ಪಿ ಸಂಘಟನೆ ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಎಬಿವಿಪಿ ಮುಖಂಡೆ ಪೂಜಾ ವೀರಶೆಟ್ಟಿ ಎಂಬಾಕೆ ಕೋಮು ಸೌಹಾರ್ದತೆಯನ್ನು ಹಾಳುಗೆಡವಲು ಯತ್ನಿಸಿದ್ದಳು.
ಇದೇ ಕಾರ್ಯಕ್ರಮದ ವೇದಿಕೆಯಲ್ಲಿದ್ದ ದುರ್ಗಾವಾಹಿನಿಯ ಮುಖಂಡೆ ಮಂಚಾಲೇಶ್ವರಿ ತೋಣಶ್ಯಾಳ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡುತ್ತಾ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕೂಡ ಹಿಂದೂಗಳ ಹೆಣವನ್ನು ಬೀದಿಯಲ್ಲಿಟ್ಟುಕ್ಕೊಂಡು ಪ್ರತಿಭಟಿಸುವ ಪರಿಸ್ಥಿತಿ ಬಂದಿರುವುದು ನಾಚಿಕೆಗೇಡು ಎಂದು ಹೇಳಿದ್ದರು.