ವಿಜಯಪುರ ವಿಮಾನ ನಿಲ್ದಾಣ 2022ರ ಮಾರ್ಚ್ ವೇಳೆಗೆ ಪೂರ್ಣ: ಗೋವಿಂದ ಕಾರಜೋಳ

Prasthutha|

ಬೆಂಗಳೂರು. ಜು.17: ವಿಜಯಪುರ ವಿಮಾನ ನಿಲ್ದಾಣ ಕಾರ್ಯಾಚರಣೆ ನಡೆಸಲು ಮೆ.ಟರ್ಬೋ ಏರ್ ಲೈನ್ ಕಂಪನಿಯವರು ಮುಂದೆ ಬಂದಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.

- Advertisement -

ವಿಜಯಪುರ ವಿಮಾನ ನಿಲ್ದಾಣದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿದಿನ ಎಟಿಆರ್ 72 ವಿಮಾನವನ್ನು ಹಾರಾಟ ನಡೆಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ಹೊಂದಿವೆ. ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯು ತ್ವರಿತಗತಿಯಿಂದ ನಡೆಯುತ್ತಿದ್ದು, ಈ ಕಾಮಗಾರಿಯನ್ನು 2022ರ ಮಾರ್ಚ್ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ಕಾಮಗಾರಿಯು ತ್ವರಿತಗತಿಯಾಗಿ ಗುರಿಮೀರಿ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ನಿರಂತರವಾಗಿ ತಾವು ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಈ ವಿಮಾನ ನಿಲ್ದಾಣದ ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ಹಾಗೂ ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ. ಉತ್ತರಕರ್ನಾಟಕದ ಅದರಲ್ಲೂ ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಗಳ ಜನತೆಗೆ ವಿಮಾನಯಾನ ಕೈಗೊಳ್ಳಲು ಅನುವಾಗಲಿದೆ.

ಸಂಸದ ರಮೇಶ್ ಜಿಗಜಿಣಗಿ ಹಾಗೂ ಅವಳಿ ಜಿಲ್ಲೆಗಳ ಜನಪ್ರತಿನಿಧಿಗಳ ಒತ್ತಾಸೆಯಂತೆ ಪಾರಂಪರಿಕ ತಾಣಗಳ ತೊಟ್ಟಿಲು, ಪ್ರವಾಸೋದ್ಯಮ ಸ್ಥಳಗಳ ಸಂಗಮ, ತೋಟಗಾರಿಕೆ ಜಿಲ್ಲೆಗಳ ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಗಳು, ಸೊಲ್ಲಾಪುರ ಜಿಲ್ಲೆಯ ಬಹುದಿನಗಳ ಕನಸಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನನಸು ಮಾಡಲು ಸದಾಶಯಹೊಂದಿ, ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಅನುದಾನ ನೀಡಿ, ಯೋಜನೆಯ ಯಶಸ್ವಿಗೆ ಕಾರಣೀಭೂತರಾಗಿದ್ದಾರೆ. ಸ್ಥಳೀಯ, ದೇಶ ವಿದೇಶಗಳ ಪ್ರವಾಸಿಗರು, ನಾಗರೀಕರು ಸುಲಲಿತವಾಗಿ ವಿಮಾನಯಾನ ನಡೆಸಿ, ಈ ಐತಿಹಾಸಿಕ, ಪಾರಂಪರಿಕ, ಪ್ರವಾಸೋದ್ಯಮ ತಾಣಗಳಿಗೆ ಪ್ರವಾಸ ಕೈಗೊಳ್ಳಲು ಅನುವಾಗಲಿದೆ. ನಾವು ನೀಡಿದ ವಾಗ್ದಾನದಂತೆ ವಿಮಾನ ನಿಲ್ದಾಣವು ಶೀಘ್ರವಾಗಿ ನಿರ್ಮಾಣವಾಗುವುದಲ್ಲದೇ, ಕಾರ್ಯಾಚರಣೆಯೂ ಪ್ರಾರಂಭವಾಗಲಿದೆ ಎಂದರು.

Join Whatsapp