ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ವಿಜ​ಯೇಂದ್ರ ಸ್ಪರ್ಧಿಸುವುದು ಪಕ್ಕಾ: ಬಿಎಸ್‌ವೈ

Prasthutha|

ತುಮ​ಕೂ​ರು :  ಮುಂಬ​ರುವ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ವಿಜ​ಯೇಂದ್ರ ಸ್ಪರ್ಧಿ​ಸು​ವುದು ಖಚಿತ. ಆದರೆ ಕ್ಷೇತ್ರ ಯಾವು​ದೆಂದು ನಿರ್ಧಾ​ರ​ವಾ​ಗಿಲ್ಲ ಎಂದು ಮಾಜಿ ಮುಖ್ಯ​ಮಂತ್ರಿ ಬಿ.ಎಸ್‌.ಯಡಿ​ಯೂ​ರಪ್ಪ ತಿಳಿ​ಸಿ​ದ್ದಾರೆ.

- Advertisement -

ಈ ಹಿಂದೆ ಪುತ್ರ ವಿಜಯೇಂದ್ರ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವುದು ಪಕ್ಕಾ ಎಂದು ಹೇಳಿದ್ದರೂ ಯಡ್ಡಿಗೆ ಹೈಕಮಾಂಡ್ ಮಣೆ ಹಾಕದ ಕಾರಣ ವಿಜಯೇಂದ್ರಗೆ ಟಿಕೇಟ್ ಕೈ ತಪ್ಪಿತ್ತು. ಇದೀಗ ಮತ್ತೆ ಯಡಿಯೂರಪ್ಪ ಭರವಸೆ ಇಟ್ಟುಕೊಂಡಿದ್ದು ಅವರು ತುಮ​ಕೂ​ರಿ​ನಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧಿಸುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಹೇಳಿದ್ದಾರೆ.

ರಾಜ್ಯದ ಉದ್ದಗಲಕ್ಕೂ ಪ್ರವಾಸ ಪ್ರಾರಂಭವಾಗಿದ್ದು ಮುಂಬರುವ ಚುನಾವಣೆಯಲ್ಲಿ 140 ಕ್ಷೇತ್ರಗಳನ್ನು ಗೆದ್ದು, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂಬುದು ನಮ್ಮ ದೃಷ್ಟಿ. ಆ ದೃಷ್ಟಿಯಿಂದ ರಾಜ್ಯಪ್ರವಾಸ ಪ್ರಾರಂಭವಾಗಿದೆ ಎಂದರು. ವಾರಕ್ಕೊಂದು ಜಿಲ್ಲೆಗೆ ತೆರಳಿ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ಮಾಡುವುದಾಗಿ ತಿಳಿ​ಸಿದ ಅವರು ಎಲ್ಲಾ ವರ್ಗದ ಜನರನ್ನು ನಮ್ಮ ಜೊತೆಗೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.



Join Whatsapp