ಬಂಟ್ವಾಳ: ವಿಧಾನಪರಿಷತ್ ಉಪಚುನಾವಣೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸೋಮವಾರ ನಡೆಯುತ್ತಿದ್ದು, ಬಂಟ್ವಾಳ ತಾಲೂಕಿನ 51 ಗ್ರಾಪಂ, 2 ನಗರ ಸ್ಥಳೀಯಾಡಳಿತ ಸಂಸ್ಥೆ ಸೇರಿ ಒಟ್ಟು 53 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಬೆಳಗಿನ ಅವಧಿಯಲ್ಲೇ ಬಿರುಸಿನಿಂದ ನಡೆಯಿತು.
ಬಂಟ್ವಾಳ ತಾಲೂಕಿನಲ್ಲಿ 381 ಪುರುಷರು, 414 ಮಹಿಳೆಯರು ಸೇರಿ 795 ಮತದಾರರು ಇದ್ದು, ತಾವು ಪ್ರತಿನಿಧಿಸುವ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮತ ಚಲಾಯಿಸುತ್ತಿದ್ದಾರೆ.
ಬಂಟ್ವಾಳ ಪುರಸಭೆ ಉಪಾಧ್ಯಕ್ಷ ಮೊನೀಶ್ ಆಲಿ ಸಹಿತ ಎಸ್.ಡಿ.ಪಿ.ಐ. ಸದಸ್ಯರು ಬಂಟ್ವಾಳ ಪುರಸಭೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಈ ಸಂದರ್ಭ ಎಸ್.ಡಿ.ಪಿ.ಐ. ಅಭ್ಯರ್ಥಿ ಅನ್ವರ್ ಸಾದತ್ ಎಸ್. ಸದಸ್ಯರೊಂದಿಗೆ ಉಪಸ್ಥಿತರಿದ್ದರು.