ಮಲಪ್ಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕತ್ತರಿಸಿ ಎಸೆಯುತ್ತೇವೆ ಎಂದು ಪ್ರಚೋದನಕಾರಿ ಘೋಷಣೆ ಕೂಗುವ ಬಿಜೆಪಿ ಕಾರ್ಯಕರ್ತರ ವೀಡಿಯೋವೊಂದನ್ನು ಬಿಜೆಪಿ ಕೇರಳ ರಾಜ್ಯ ವಕ್ತಾರ ಸಂದೀಪ್ ವಾಚಸ್ಪತಿ ಪೇಸ್ಬುಕ್ ಲೈವ್ ನಲ್ಲಿ ಹಂಚಿದ್ದು, ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಕೇರಳದ ಕೊಡುಂಗಲ್ಲೂರಿನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಬಿಜೆಪಿ ಕಾರ್ಯಕರ್ತರು ಮಲಯಾಳಮ್ ಭಾಷೆಯಲ್ಲಿ ಪ್ರಚೋದನಕಾರಿ ಘೋಷನೆ ಕೂಗುತ್ತಿರುವುದು ವೈರಲ್ ಆಗಿದೆ. 2006 ರಲ್ಲಿ ಹತ್ಯೆಗೀಡಾದ ಬಿಜೆಪಿಯ ಪುರಸಭೆಯ ಕಾರ್ಯದರ್ಶಿ ಸತ್ಯೇಶ್ ಅವರ ಸ್ಮರಣಾರ್ಥ ರ್ಯಾಲಿಯನ್ನು ಆಯೋಜಿಸಲಾಗಿತ್ತು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕೊಂದು, ಕತ್ತರಿಸಿ ನಾಯಿಗಳಿಗೆ ಎಸೆಯುತ್ತೇವೆ ಎಂಬ ಘೋಷಣೆಗಳನ್ನು ಕೂಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.