ಬೀಜಿಂಗ್: ಕೋವಿಡ್ ಪೀಡಿತ ಝೆಂಗ್’ಝೌನಲ್ಲಿ ಲಾಕ್’ಡೌನ್’ನಿಂದ ತಪ್ಪಿಸಿಕೊಳ್ಳಲು ವಲಸೆ ಕಾರ್ಮಿಕರು ಚೀನಾದ ಐಫೋನ್ ಫ್ಯಾಕ್ಟರಿಯ ಬೃಹತ್ ಕಂಪೌಂಡ್ ಅನ್ನು ಹಾರಿ ಪರಾರಿಯಾದ ಘಟನೆ ಚೀನಾದ ಬೀಜಿಂಗ್’ನಲ್ಲಿ ನಡೆದಿದೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಝೆಂಗ್ಝೌದಲ್ಲಿನ ಆ್ಯಪಲ್’ನ ಫ್ಯಾಕ್ಟರಿಯಿಂದ ಕಾರ್ಮಿಕರು ಪರಾರಿಯಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಲಾಕ್’ಡೌನ್ ಹೇರಲಾಗಿತ್ತು. ಇದಕ್ಕಾಗಿ ಫ್ಯಾಕ್ಟರಿಯ ಸುತ್ತಾ ಕಬ್ಬಿಣದ ಬೇಲಿಯನ್ನು ತಡೆಗೋಡೆಯಾಗಿ ನಿರ್ಮಿಸಲಾಗಿದ್ದು, ಕಾರ್ಮಿಕರು ಇದನ್ನು ಹಾರಿ ತಪ್ಪಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಏಕಾಏಕಿ ಹಲವಾರು ಕಾರ್ಮಿಕರನ್ನು ಕ್ವಾರಂಟೈನ್’ನಲ್ಲಿ ಇರಿಸಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು.