ಮಹಿಳೆಗೆ ನಡುರಸ್ತೆಯಲ್ಲಿ ತೀವ್ರ ಥಳಿತದ ವೀಡಿಯೊ ವೈರಲ್: TMC ವಿರುದ್ಧ CPIM,BJP ಕಿಡಿ

Prasthutha|

ಆರೋಪಿಗೆ ಪಕ್ಷದಲ್ಲಿ ಯಾವುದೇ ಹುದ್ದೆ ಇಲ್ಲ ಎಂದ ಟಿಎಂಸಿ

- Advertisement -

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಹಿಳೆಯೊಬ್ಬರಿಗೆ ನಡುರಸ್ತೆಯಲ್ಲೆ ಅಮಾನವೀಯವಾಗಿ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಪುರುಷನೊಬ್ಬ ಮಹಿಳೆ ಮತ್ತು ಇನ್ನೊಬ್ಬ ಪುರುಷನನ್ನು ಕೋಲುಗಳಿಂದ ತೀವ್ರವಾಗಿ ಥಳಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಘಟನೆ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದ ಲಕ್ಷ್ಮೀಕಾಂತಪುರದಲ್ಲಿ ನಡೆದಿದೆ ಎಂದು ಹೇಳಲಾಗಿದೆ.

ವ್ಯಕ್ತಿ ಮಹಿಳೆ ಮತ್ತು ಪುರುಷನನ್ನು ದೊಣ್ಣೆಯಿಂದ ಅಮಾನುಷವಾಗಿ ಥಳಿಸುತ್ತಿದ್ದಾನೆ. ತಾಜೆಮುಲ್ ಚೋಪ್ರಾ ವಿಧಾನಸಭಾ ಕ್ಷೇತ್ರದ ಟಿಎಂಸಿ ಶಾಸಕ ಹಮೀದುರ್ ರೆಹಮಾನ್ ಅವರ ನಿಕಟವರ್ತಿ ಎನ್ನಲಾಗಿದ್ದು ಈ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

- Advertisement -

ಜೆಸಿಬಿ ಎಂದು ಕರೆಯಲ್ಪಡುವ ತಾಜೆಮುಲ್ ಎಂಬ ವ್ಯಕ್ತಿ ಮಹಿಳೆ ಮತ್ತು ಪುರುಷನನ್ನು ದೊಣ್ಣೆಯಿಂದ ಅಮಾನುಷವಾಗಿ ಥಳಿಸುತ್ತಿದ್ದಾನೆ ಎನ್ನಲಾಗಿದೆ.

ಎಕ್ಸ್ ನಲ್ಲಿ ವೀಡಿಯೊವನ್ನು ಹಂಚಿಕೊಂಡ CPI(M) ಪಶ್ಚಿಮ ಬಂಗಾಳ ರಾಜ್ಯ ಕಾರ್ಯದರ್ಶಿ ಎಂ.ಡಿ. ಸಲೀಂ, ‘#ಕಾಂಗರೂ ಕೋರ್ಟ್ ಕೂಡ ಅಲ್ಲ. ವಿಚಾರಣೆ ಮತ್ತು ಶಿಕ್ಷೆಯನ್ನು JCB ಎಂದು ಅಡ್ಡಹೆಸರಿನ ತಾಜೆಮುಲ್ ತೃಣಮೂಲ ಕಾಂಗ್ರೆಸ್ ನ ಗೂಂಡಾಗಳು ಚೋಪ್ರಾದಲ್ಲಿ ನೀಡಿದ್ದಾರೆ. ಮಮತಾ ಬ್ಯಾನರ್ಜಿ ಆಳ್ವಿಕೆಯಲ್ಲಿ ಅಕ್ಷರಶಃ ಬುಲ್ಡೋಜರ್ ನ್ಯಾಯಎಂದು ಬರೆದಿದ್ದಾರೆ.

ಮಹಿಳೆಯ ಮೇಲೆ ನಿರ್ದಯವಾಗಿ ಹಲ್ಲೆ ನಡೆಸುತ್ತಿರುವ ಜೆಸಿಬಿ ಅಕಾ ತಾಜೆಮುಲ್ ಎನ್ನುವವನು ಮನ್ಸೂರ್ ಆಲಂನ ಕೊಲೆಯ ಪ್ರಮುಖ ಆರೋಪಿಯಾಗಿದ್ದಾನೆ. ಕೊಲೆಗಾರರು ನಿರಾಳವಾಗಿದ್ದಾರೆ. ಬಂಗಾಳದಲ್ಲಿ ನ್ಯಾಯದ ವಿಡಂಬನೆ ಮುಂದುವರೆದಿದೆ ಎಂದು ಬರೆದಿದ್ದಾರೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಇದು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಆಡಳಿತದ ಕೊಳಕು ಮುಖವಾಗಿದೆ. ಮಹಿಳೆಯನ್ನು ನಿರ್ದಯವಾಗಿ ಥಳಿಸುವ ವೀಡಿಯೊದಲ್ಲಿರುವ ವ್ಯಕ್ತಿ ತಾಜೆಮುಲ್ (ಜೆಸಿಬಿ ಎಂದು ಕರೆಯಲಾಗುತ್ತದೆ) ತಮ್ಮ ‘ಇನ್ಸಾಫ್’ ಸಭೆಯ ಮೂಲಕ ತ್ವರಿತ ನ್ಯಾಯವನ್ನು ನೀಡಿದ್ದಾನೆ. ಈತ ಚೋಪ್ರಾ ಶಾಸಕ ಹಮೀದುರ್ ರೆಹಮಾನ್ ಅವರ ನಿಕಟವರ್ತಿ. ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯೇ ಇಲ್ಲ. ಮಮತಾ ಬ್ಯಾನರ್ಜಿ ಈ ದೈತ್ಯನ ವಿರುದ್ಧ ವರ್ತಿಸುತ್ತಾರೆಯೇ ಅಥವಾ ಶೇಖ್ ಷಹಜಹಾನ್ ಪರವಾಗಿ ನಿಂತಂತೆ ಅವನನ್ನು ರಕ್ಷಿಸುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಆರೋಪಿಗೆ ಪಕ್ಷದಲ್ಲಿ ಯಾವುದೇ ಹುದ್ದೆ ಇಲ್ಲ ಎಂದು ಟಿಎಂಸಿ ಪ್ರತಿಕ್ರಿಯಿಸಿದೆ.

ಟಿಎಂಸಿ ವಕ್ತಾರ ಶಂತನು ಸೇನ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆದರೆ ಎಡರಂಗದ ಆಡಳಿತದಲ್ಲಿಯೂ ಇಂತಹ ಕಾಂಗರೂ ನ್ಯಾಯಾಲಯಗಳು ಸಾಮಾನ್ಯವಾಗಿದ್ದವು ಎಂದು ಹೇಳಿದ್ದಾರೆ.



Join Whatsapp