ಜೈಪುರ: ಬಿಜೆಪಿ ಕಚೇರಿ ಎದುರು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ತೆರಳುವಾಗ ಬಿಜೆಪಿ ಕಚೇರಿಯಲ್ಲಿದ್ದವರು ರಾಹುಲ್ ಗಾಂಧಿ ಕಡೆಗೆ ಕೈ ಬೀಸಿದಾಗ, ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ನೀಡಿದ ಅಪರೂಪದ ಘಟನೆ ಮಂಗಳವಾರ ನಡೆದಿದೆ.
ಜಲಾವರ್’ನಲ್ಲಿ ಭಾರತ್ ಜೋಡೋ ಯಾತ್ರೆ ಮಂಗಳವಾರ ಬೆಳಿಗ್ಗೆ ಬಿಜೆಪಿ ಕಚೇರಿಯೆದುರು ಹಾದು ಹೋಯಿತು. ಕಚೇರಿಯ ಮೇಲೆ ನಿಂತಿದ್ದ ಬಿಜೆಪಿಗರಲ್ಲಿ ಕೆಲವರು ಯಾತ್ರೆಯ ನಡಿಗೆಯವರತ್ತ ಕೈ ಬೀಸಿದರು. ಇವರಲ್ಲೂ ಕೆಲವರು ಅವರತ್ತ ಕೈ ಬೀಸಿದರು. ಆಗ ಬಿಜೆಪಿ ಕಚೇರಿಯಲ್ಲಿದ್ದ ಕೆಲವರು ಮೋದಿ ಮೋದಿ ಎಂದು ಕೂಗಿದರು. ಆಗ ಅವರಿಗೆ ರಾಹುಲ್ ಗಾಂಧಿಯವರು ಫ್ಲೈಯಿಂಗ್ ಕಿಸ್ ಗಳನ್ನು ನೀಡಿ ಮುಂದುವರಿದರು. ಈ ವೀಡಿಯೋ ಈಗ ವೈರಲ್ ಆಗುತ್ತಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಸ್ತಾರಾ, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಹಲವು ಸಚಿವರು ಮತ್ತು ಶಾಸಕರು ಈ ನಡಿಗೆ ಸಮಯದಲ್ಲಿ ಇದ್ದರು. ನಿನ್ನೆ ಸಂಘ ಪರಿವಾರದವರು ಅವರೇಕೆ ಜಯ್ ಜಯ್ ರಾಮ್ ಎಂದು ಗ್ರೀಟ್ ಮಾಡಬಾರದು ಎಂದಿದ್ದರು. ರಾಹುಲ್ ಗಾಂಧಿಯವರು ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಉತ್ತರಿಸಿದ್ದಾರೆ ಎನ್ನಬಹುದು.
ಆ ವೀಡಿಯೋ ಈಗಾಗಲೇ 1.37 ಲಕ್ಷ ವೀಕ್ಷಣೆ, 168 ರೀಟ್ವೀಟ್, 400 ಲೈಕ್ ಕಂಡಿದೆ. ಅಜಯ್ ಮಾಕೆನ್ ಅವರು ರಾಜಸ್ತಾನ ರಾಜ್ಯ ಉಸ್ತುವಾರಿಗೆ ರಾಜೀನಾಮೆ ನೀಡಿದ್ದರು. ಇದೇ ವೇಳೆ ಪಂಜಾಬಿನ ಸುಖ್ಜಿಂದರ್ ಸಿಂಗ್ ರಾಂಧವಾರನ್ನು ಕಾಂಗ್ರೆಸ್ ಪಕ್ಷವು ಹೊಸ ರಾಜ್ಯ ಉಸ್ತುವಾರಿಯಾಗಿ ನೇಮಿಸಿದೆ.