ಪ್ಯಾರಿಸ್ : ಫ್ರೆಂಚ್ ನ ಲಿಯೊನ್‍ನಲ್ಲಿ ಆಹಾರ ಮೇಳದಲ್ಲಿ ಭಾಗವಹಿಸಲು ಬಂದ ಫ್ರೆಂಚ್ ಅಧ್ಯಕ್ಷ ಇಮ್ಯಾನುವೇಲ್ ಮ್ಯಾಕ್ರೋನ್‍ರ ಮೇಲೆ ಮೊಟ್ಟೆಯೆಸೆದ ಘಟನೆ ನಡೆದಿದೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಜನರ ನಡುವೆ ನಡೆದು ಹೋಗುವಾಗ ಮೊಟ್ಟೆ ಎಸೆಯಲಾಗಿದೆ. ತದನಂತರ ಸುರಕ್ಷಾ ಅಧಿಕಾರಿಗಳು ಮ್ಯಾಕ್ರೋನ್‍ರ ಸುತ್ತ ನೆರೆದು ರಕ್ಷಣೆ ನೀಡಿದರು. ನಂತರ ಮೊಟ್ಟೆ ಎಸೆದ ವ್ಯಕ್ತಿಗೆಯನ್ನು ಕೆಲವು ಭದ್ರತಾ ಅಧಿಕಾರಿಗಳು ಸುತ್ತುವರಿದಿದ್ದಾರೆ. ದುಷ್ಕರ್ಮಿಯ ವಿವರ ನೀಡಲಾಗಿಲ್ಲ. ಮೊಟ್ಟೆ ಎಸೆದ ಕಾರಣವೂ ತಿಳಿದು ಬಂದಿಲ್ಲ.
ಈ ಹಿಂದೆಯೂ ಮ್ಯಾಕ್ರೋನ್‍ಗೆ ಒಬ್ಬ ವ್ಯಕ್ತಿ ಚಪ್ಪಲಿಯಿಂದ ಹೊಡೆಯುವ ವೀಡಿಯೊ ವೈರಲ್ ಆಗಿತ್ತು. ಸಾರ್ವಜನಿಕ ಕಾರ್ಯಕ್ರಮಕ್ಕೆ ಹೆಚ್ಚು ಸಮಯ ವಿನಿಯೋಗಿಸುವ ವ್ಯಕ್ತಿ ಮ್ಯಾಕ್ರೋನ್ ಆಗಿದ್ದಾರೆ. ಆರು ತಿಂಗಳಲ್ಲಿ ಫ್ರಾನ್ಸಿನಲ್ಲಿ ಮುಂದಿನ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ಈ ಚುನಾವಣೆಯಲ್ಲಿ ಮ್ಯಾಕ್ರೋನ್ ಸ್ಪರ್ಧಿಸುವ ಬಗ್ಗೆ ವಿವರಗಳು ಲಭಿಸಿಲ್ಲ.