ನಾಯಿಯನ್ನು ಕಾರಿಗೆ ಕಟ್ಟಿ ಎಳೆದೊಯ್ದ ಕಾರು ಚಾಲಕ: ವೀಡಿಯೋ ವೈರಲ್

Prasthutha|

ರಾಜಸ್ಥಾನ: ಕಾರು ಚಾಲಕನೊಬ್ಬ ನಾಯಿಯನ್ನು ಕಾರಿಗೆ ಕಟ್ಟಿ ರಸ್ತೆ ಮೇಲೆ ಎಳೆದುಕೊಂಡು ಹೋಗುತ್ತಿರುವ ಘಟನೆ ರಾಜಸ್ಥಾನದ ಜೋಧ್ ಪುರದಲ್ಲಿ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -


ಅಮಾನವೀಯ ಘಟನೆ ಜನನಿಬಿಡ ರಸ್ತೆಯಲ್ಲಿ ಸಂಭವಿಸಿದೆ. ಅಲ್ಲಿ ಹಲವಾರು ವಾಹನಗಳು ಸಂಚರಿಸುತ್ತಿವೆ. ಉದ್ದನೆಯ ಹಗ್ಗದಿಂದ ನಾಯಿಯನ್ನು ಕಟ್ಟಲಾಗಿದೆ. ನಾಯಿ ವಾಹನದ ಒಂದು ಬದಿಯಿಂದ ಇನ್ನೊಂದು ಬದಿಗೆ ಅಪಾಯಕಾರಿಯಾಗಿ ಚಲಿಸುತ್ತಿದೆ. ಕಾರನ್ನು ಹಿಂಬಾಲಿಸಿಕೊಂಡು ಬಂದ ವಾಹನದಲ್ಲಿದ್ದವರು ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಮೋಟಾರು ಸೈಕಲ್ ನಲ್ಲಿ ಬಂದ ವ್ಯಕ್ತಿಯೊಬ್ಬ ತನ್ನ ವಾಹನವನ್ನು ಕಾರಿನ ಮುಂದೆ ನಿಲ್ಲಿಸಿ, ಚಾಲಕನಿಗೆ ಬುದ್ಧಿ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ ವಾಹನದ ಸುತ್ತ ಜಮಾಯಿಸಿದ ಸ್ಥಳೀಯರು, ನಾಯಿಯ ಸರಪಳಿ ಬಿಚ್ಚಿ, ಎನ್ ಜಿಒವೊಂದಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.


ನಾಯಿಯ ಕಾಲುಗಳ ಮೂಳೆ ಮುರಿದಿದ್ದು, ಸ್ಥಳಕ್ಕಾಮಿಸಿದ ಸಿಬ್ಬಂದಿ ಶ್ವಾನಕ್ಕೆ ಚಿಕಿತ್ಸೆ ನೀಡಿದ್ದಾರೆ.



Join Whatsapp