ಸಿಂಹ ಮೇಯಿಸುವ ತರುಣಿಯ ವೀಡಿಯೋ ವೈರಲ್ !

Prasthutha|

ಮೂರು ಗಂಡು ಸಿಂಹಗಳನ್ನು ತರುಣಿಯೊಬ್ಬಳು ಸುತ್ತಾಡಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.   ‘ಈಕೆ ಯಾವ ಲೋಕದ ನಾರಿ’ ಎಂಬ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಆ ತರುಣಿಯು ಕಾಡಿನಲ್ಲಿ ಆ ಮೂರು ಸಿಂಹಗಳನ್ನು ಸಾಕು ಪ್ರಾಣಿಗಳಂತೆ ಸುತ್ತಾಡಿಸುತ್ತಿರುವುದು ವೀಡಿಯೋದಲ್ಲಿದೆ. ಕೆಲವೊಮ್ಮೆ ಆಕೆ ಸಿಂಹಗಳ ಹಿಂದೆ ಇಲ್ಲವೇ ಕೆಲವೊಮ್ಮೆ ಸಿಂಹಗಳ ಮುಂದೆ ಓಡಾಡುತ್ತಿರುವುದು ವೀಡಿಯೋದಲ್ಲಿದೆ. ಆಕೆಯ ಜೊತೆಯಲ್ಲಿ ಆ ಸಿಂಹಗಳು ಸಹಜ ರೀತಿಯಲ್ಲಿ ವರ್ತಿಸುತ್ತಿರುವುದು ಸಹ ಕಂಡು ಬರುತ್ತಿದೆ.

- Advertisement -

ಜೆನ್ಸ್ ಸೋಶಿಯಲ್ ಮೀಡಿಯಾ ಎಂಬ ಜಾಲ ತಾಣವು ಈ ವೀಡಿಯೋ ಹರಿಯಬಿಟ್ಟಿದೆ. ಈ ಜಾಲ ತಾಣದಲ್ಲಿ ಪ್ರಾಣಿ ಮತ್ತು ಮಾನವರ ಸಂಪರ್ಕಗಳನ್ನು ತೋರಿಸುವ ವೀಡಿಯೋಗಳು ಹೆಚ್ಚಾಗಿ ಇವೆ. ಅವುಗಳಲ್ಲಿ ಇದು ತುಂಬ ವಿಶೇಷವಾದುದು. ಇಲ್ಲಿ ಸಿಂಹಗಳೂ ಬೆದರಿಲ್ಲ; ಆಕೆಯೂ ಹೆದರಿಲ್ಲ.

ನವೆಂಬರ್ 12ರಂದು ಪೋಸ್ಟ್ ಮಾಡಿದ ವೀಡಿಯೋ ಇದಾಗಿದೆ. ಇನ್ ಸ್ಟಾಗ್ರಾಮಿನಲ್ಲಿ ಅದನ್ನು ಈಗಾಗಲೇ 60 ಲಕ್ಷ ಜನರು ವೀಕ್ಷಿಸಿದ್ದಾರೆ. 2 ಲಕ್ಷ ಜನರು ಲೈಕ್ ಮಾಡಿದ್ದಾರೆ. “ಆಕೆ ತುಂಬ ವಿಶೇಷ ಮಹಿಳೆಯಾದುದರಿಂದ ಆ ಮೂರು ಸಿಂಹಗಳು ಆಕೆಯನ್ನು ಅನುಸರಿಸುತ್ತಿವೆ” ಎಂಬ ಕಮೆಂಟ್ ಗಳು ಸಾಮಾನ್ಯವಾಗಿವೆ.

ಅವು ನಿನ್ನನ್ನು ನಂಬಿವೆ, ಈ ಹೆಮ್ಮೆ ಎಲ್ಲರಿಂದಲೂ ಸಾಧ್ಯವಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ನೀನು ಸಿಂಹಗಳನ್ನು ಪಳಗಿಸಿರುವೆ; ಅವುಗಳೊಳಗೆ ಕೊಲೆಗಾರ ಇದ್ದಾನೆ; ಒಂದೇ ಸೆಕೆಂಡಿನಲ್ಲಿ ಅವು ನಿನ್ನನ್ನು ಸೀಳಿ ಹಾಕಬಹುದು ಎಂಬ ಮಾದರಿಯ ಕಮೆಂಟ್ ಗಳೂ ಇವೆ. 

- Advertisement -