ಮೂರು ವರ್ಷದ ಮಗುವನ್ನು ಕರಡಿಯಿದ್ದ ಆವರಣಕ್ಕೆ ಎಸೆದ ತಾಯಿ‌ ! CCTVಯಲ್ಲಿ ಸೆರೆಯಾಯ್ತು ಕ್ರೂರಿ ತಾಯಿಯ ಕೃತ್ಯ

Prasthutha|

ಉಝ್ಬೇಕಿಸ್ತಾನ; ಮೃಗಾಲಯವೊಂದಕ್ಕೆ ತನ್ನ ಮೂರು ವರ್ಷ ಪ್ರಾಯದ ಮಗುವಿನ ಜೊತೆ ಬಂದಿದ್ದ ತಾಯಿಯೊಬ್ಬರು, 16 ಅಡಿ ಎತ್ತರದಿಂದ ಕರಡಿಯಿದ್ದ ಆವರಣಕ್ಕೆ ತನ್ನ ಮಗುವನ್ನು ಎಸೆದಿರುವ ಅಮಾನವೀಯ ಘಟನೆ ಉಝ್ಬೇಕಿಸ್ತಾನದ ತಾಷ್ಕೆಂಟ್ ಮೃಗಾಲಯದಲ್ಲಿ ನಡೆದಿದೆ.
ಹೆತ್ತ ತಾಯಿಯ ಕ್ರೂರ ಕೃತ್ಯವು ಮೃಗಾಲಯದಲ್ಲಿ ಅಳವಡಿಸಲಾಗಿದ್ದ CCTV ಯಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

- Advertisement -


ತಾಯಿಯು ಮಗುವನ್ನು ಎಸೆಯುತ್ತಿರುವುದನ್ನು ನೋಡಿದ ಮೃಗಾಲಯದ ಸಿಬ್ಬಂದಿ ತಕ್ಷಣವೇ ಕರಡಿಯಿದ್ದ ಆವರಣಕ್ಕೆ ತೆರಳಿ ಕರಡಿಗೆ ಆಹಾರವಾಗುವ ಮುನ್ನವೇ ಮಗುವನ್ನು ರಕ್ಷಿಸಿದ್ದಾರೆ. ಆದರೆ 16 ಅಡಿ ಎತ್ತರದಿಂದ ಬಿದ್ದ ಪರಿಣಾಮ ಮಗುವಿನ ದೇಹದಲ್ಲಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೃತ್ಯ ಎಸಗಿದ ತಾಯಿಯ ವಿರುದ್ಧ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ.



Join Whatsapp