ಝಾಂಬಿಯಾದ ವಿವಿಯ ಉಪ ಕುಲಪತಿಯಾಗಿ ಡಾ. ಕಾಪು ಮುಹಮ್ಮದ್ ನೇಮಕ

Prasthutha|

ಲುಸಾಕಾ: ಪ್ರತಿಷ್ಠಿತ ಲಂಡನ್ ಅಮೆರಿಕನ್ ಯುನಿವರ್ಸಿಟಿ ಕಾಲೇಜಿನ ಉಪ ಕುಲಪತಿಯಾಗಿ ಡಾ. ಕಾಪು ಮುಹಮ್ಮದ್ ಅವರು ನೇಮಕಗೊಂಡಿದ್ದು, ಕಾಲೇಜಿನ ಗವರ್ನರ್’ಗಳ ಮಂಡಳಿಯು ಈ ಆಯ್ಕೆ ಮಾಡಿದೆ.


ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಲು ಶ್ರಮಿಸುತ್ತಿರುವ ಲುಸಾಕಾದಲ್ಲಿರುವ ಈ ಪ್ರತಿಷ್ಠಿತ ಕಾಲೇಜು ದೇಶದ ಉನ್ನತ ಶಿಕ್ಷಣ ಪ್ರಾಧಿಕಾರದಿಂದ ಮಾನ್ಯತೆ ಪಡೆದಿದೆ.

- Advertisement -


ಲಂಡನ್ ಅಮೇರಿಕನ್ ಸಿಟಿ ಕಾಲೇಜಿನ ಡೀನ್ ಮತ್ತು ಆಡಳಿತ ನಿರ್ದೇಶಕ ಹಾಗೂ ಅಮೇರಿಕದ ಮಿಶಿಗನ್ ನಲ್ಲಿರುವ ಮೆಡೋನಾ ಯುನಿವರ್ಸಿಟಿಯ ಪ್ರೊಫೆಸರ್ ಕೂಡಾ ಆಗಿರುವ ಕಾಪು ಮುಹಮ್ಮದ್, ರಾಷ್ಟ್ರೀಯ ಅಂತಾರಾಷ್ಟ್ರೀಯ ಅಡ್ಮಿನಿಸ್ಟ್ರೇಷನ್ ಸಂಸ್ಥೆಗಳಿಂದ ಸುಮಾರು ಐವತ್ತಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ.


ಅಮೇರಿಕ, ಯುರೋಪ್ ಮತ್ತು ಭಾರತದಿಂದ ಕ್ರಮವಾಗಿ ಬಿಸಿನೆಸ್ ಅಡ್ಮಿಸ್ಟ್ರೇಷನ್, ಶಿಕ್ಷಣ ಮತ್ತು ಆಡಳಿತ ವಿಷಯಗಳಲ್ಲಿ ಡಾಕ್ಟರೇಟ್ ಪಡೆದಿರುವ ಕಾಪು ಮುಹಮ್ಮದ್ ರವರು ಅಮೆರಿಕನ್ ಯುರೋಪಿಯನ್ ಮತ್ತು ಭಾರತೀಯ ವಿವಿಗಳಲ್ಲಿ Phd ಎಕ್ಸಾಮಿನರ್ ಮತ್ತು ಗೈಡ್ ಕೂಡಾ ಆಗಿದ್ದಾರೆ.

- Advertisement -