ಕರ್ವಾ ಚೌತ್ ವೇಳೆ ಹಿಂದೂ ಮಹಿಳೆಯರಿಗೆ ಮೆಹಂದಿ ಹಾಕದಂತೆ ವಿಎಚ್ ಪಿ ಎಚ್ಚರಿಕೆ

Prasthutha|

ಲಕ್ನೋ: ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಕರ್ವಾ ಚೌತ್ ವೇಳೆ ಹಿಂದೂ ಹೆಣ್ಣುಮಕ್ಕಳಿಗೆ ಮೆಹಂದಿ ಹಾಕದಂತೆ ವಿಶ್ವ ಹಿಂದೂ ಪರಿಷತ್ತು ಸೇರಿದಂತೆ ಇತರೆ ಹಿಂದುತ್ವ ಸಂಘಟನೆಗಳು ಮುಸ್ಲಿಂ ಯುವಕರಿಗೆ ಎಚ್ಚರಿಕೆ ನೀಡಿದೆ.

- Advertisement -

ಗುರುವಾರ ಮಹಿಳೆಯರು  ಕರ್ವಾ ಚೌತ್ ಆಚರಿಸುತ್ತಿದ್ದು, ಈ ಹಬ್ಬದ ಆಚರಣೆಗಾಗಿ ಹಿಂದೂ ಹೆಣ್ಣುಮಕ್ಕಳು ತಮ್ಮ ಕೈಗೆ ಮೆಹಂದಿ ಹಾಕಿಕೊಳ್ಳುವುದು ಸಂಪ್ರದಾಯ. ಮುಸ್ಲಿಂ ಸಮುದಾಯದವರೇ ಹೆಚ್ಚಾಗಿ ಮೆಹೆಂದಿ ಹಾಕುವುದರಿಂದ ಮೆಹಂದಿ ಹಾಕುವಾಗ, ಹಿಂದೂ ಹೆಣ್ಣುಮಕ್ಕಳಿಗೆ ಆಮಿಷಗಳನ್ನು ಒಡ್ಡಿ ಲವ್ ಜಿಹಾದ್ ಹಾಗೂ ಮತಾಂತರಕ್ಕಾಗಿ ಪ್ರೇರೇಪಿಸುತ್ತಾರೆ ಎಂದು ಈ ಸಂಘಟನೆಗಳು ಆರೋಪಿಸಿವೆ.

ಹಿಂದೂ ಹೆಣ್ಣುಮಕ್ಕಳು ಮೆಹೆಂದಿ ಹಾಕಿಕೊಳ್ಳಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ 13 ಮೆಹೆಂದಿ ಹಾಕುವ ಅಂಗಡಿಗಳನ್ನು ತೆರೆದಿದ್ದೇವೆ. ನಮ್ಮ ಸೊಸೆ, ಹೆಣ್ಣುಮಕ್ಕಳಿಗೆ ಹಿಂದೂಗಳೇ ಈ ಅಂಗಡಿಗಳಲ್ಲಿ ಮೆಹೆಂದಿ ಹಾಕಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಮುಖಂಡ ಹೇಳಿದರು.



Join Whatsapp