ಜಾತಿ ವ್ಯವಸ್ಥೆ ನಿರ್ಮೂಲನೆಗಾಗಿ ವಿಶ್ವ ಹಿಂದೂ ಪರಿಷತ್’ನಿಂದ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಚಾಲನೆ

Prasthutha|

ನವದೆಹಲಿ: ಹಿಂದೂ ಸಮುದಾಯದಲ್ಲಿನ ಜಾತಿ ವಿಭಜನೆಯನ್ನು ನಿವಾರಿಸಲು 10 ದಿನಗಳ ರಾಷ್ಟ್ರೀಯ ಅಭಿಯಾನಕ್ಕೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಶುಕ್ರವಾರ ಚಾಲನೆ ನೀಡಿದೆ.

- Advertisement -

“ಎಲ್ಲ ಹಿಂದೂಗಳು ಒಂದೇ” ಎಂಬ ಸಂದೇಶವನ್ನು ಸಮಾಜದಲ್ಲಿ ಹರಡುವ ನಿಟ್ಟಿನಲ್ಲಿ ವಿ.ಎಚ್.ಪಿ ವತಿಯಿಂದ ನಡೆಯುವ ಈ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದೇ ಪ್ರಚಾರ ಪಡಿಸಲಾಗುತ್ತಿದೆ.

ಜನವರಿ 23 ರಂದು ಸಮಾರೋಪಗೊಳ್ಳಲಿರುವ ‘ಸಂರಸ್ತಾ ಅಭಿಯಾನದ’ ದಿನದಂದೇ ಈ ಅಭಿಯಾನ ಕೂಡ ಸಮಾಪ್ತಿಗೊಳ್ಳಲಿದೆ. ಮೇಲ್ಜಾತಿ ಮತ್ತು ಕೆಳ ಜಾತಿಗಳಿಗೆ ಸೇರಿದ ಜನರಿಗಾಗಿ ಒಟ್ಟಿಗೆ ಸೇರಲು ಮತ್ತು ಊಟ ಮಾಡಲು ಸುಲಭವಾಗುವ ನಿಟ್ಟಿನಲ್ಲಿ ಈ ಅಭಿಯಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸಂಘಪರಿವಾರ ಉತ್ಸುಕವಾಗಿದೆ ಎಂದು ಹೇಳಲಾಗಿದೆ.

- Advertisement -

ಮೇಲ್ಜಾತಿ ಮತ್ತು ಕೆಳ ಜಾತಿ ನಡುವೆ ಮನೆಮಾಡಿರುವ ಬಿರುಕನ್ನು ಸರಿದೂಗಿಸಿ ಎಲ್ಲರನ್ನೂ ಸೇರಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುವ ಸಲುವಾಗಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಎಚ್‌ಪಿ ರಾಷ್ಟ್ರೀಯ ಕಾರ್ಯದರ್ಶಿ ದೇವ್’ಜಿ ರಾವತ್ ತಿಳಿಸಿದ್ದಾರೆ.

Join Whatsapp