ರಾಷ್ಟ್ರವ್ಯಾಪಿಯಲ್ಲಿ ಬಲವಂತದ ಮತಾಂತರ ತಡೆ ಕಾಯ್ದೆ ಜಾರಿಗೊಳ್ಳಲಿ : ವಿಶ್ವ ಹಿಂದೂ ಪರಿಷತ್ ಆಗ್ರಹ

Prasthutha|

- Advertisement -

ದೆಹಲಿ: ಎಂಟು ರಾಜ್ಯಗಳಲ್ಲಿ ಈಗಾಗಲೇ ಜಾರಿಗೊಂಡಿರುವ ಮತಾಂತರ ತಡೆ ಕಾಯ್ದೆಯು ರಾಷ್ಟ್ರ ವ್ಯಾಪಿಯಲ್ಲಿ ಜಾರಿಗೊಳಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ವಿಎಚ್‌ಪಿಯ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ‘ ಬಲವಂತದ ಮತಾಂತರಕ್ಕೆ ತಡೆಯನ್ನು ನೀಡುವ ಕಾಯ್ದೆಯು ಅತೀ ಶೀಘ್ರದಲ್ಲಿ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಜಾರಿಗೊಳಿಸಬೇಕು ಎಂದಿದ್ದಾರೆ.

- Advertisement -

ಮತಾಂತರ ಸಮಸ್ಯೆಯಿಂದ ನಮ್ಮ ದೇಶವನ್ನು ವಿಮುಕ್ತಿಗೊಳಿಸಲು ನಿರ್ದಿಷ್ಟ ಕಾನೂನನ್ನು ರೂಪಿಸುವುದು ಸದ್ಯದ ಅಗತ್ಯದ ಸಂಗತಿಯಾಗಿದೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.

ಬಲವಂತದ ಮತಾಂತರವು ಸಾಮಾಜಿಕ ಸಾಮರಸ್ಯಕ್ಕೂ ಧಕ್ಕೆ ತರುತ್ತದೆ. ಇದು ಅತ್ಯಂತ ಅಪಾಯಕಾರಿ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಬಲವಂತದ ಮತಾಂತರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮರು ದಿನವೇ ವಿ ಎಚ್ ಪಿ ಈ ಬಗೆಯಲ್ಲಿ ಸರಕಾರವನ್ನು ಆಗ್ರಹಿಸಿದೆ.

Join Whatsapp