ಪೋಪ್‌ ಫ್ರಾನ್ಸಿಸ್‌ ಭಾರತದ ಕ್ಷಮೆ ಕೇಳಬೇಕು ಎಂದ ವಿಎಚ್‌ಪಿ!

Prasthutha|

ಪೋಪ್‌ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದ ಪ್ರಧಾನಿ ನರೇಂದ್ರ ಮೋದಿ!

- Advertisement -

ಹೊಸದಿಲ್ಲಿ: ಕ್ರೈಸ್ತರ ಪರಮೋಚ್ಚ ಗುರು ಪೋಪ್‌ ಫ್ರಾನ್ಸಿಸ್‌ ಅವರು ಕ್ರೈಸ್ತರು ಎಸಗಿದ ‘ಅಪರಾಧ’ಕ್ಕೆ ಭಾರತದ ಕ್ಷಮೆ ಕೇಳಬೇಕು ಎಂದು ವಿಶ್ವ ಹಿಂದೂ ಪರಿಷತ್ (VHP) ಒತ್ತಾಯಿಸಿದೆ.

ಗುಜರಾತ್‌ನ ಜುನಾಗಢದಲ್ಲಿ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ VHPಯ ಅಂತರರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್‌ ಕುಮಾರ್‌, ಪೋಪ್‌ ಭಾರತಕ್ಕೆ ಆಗಮಿಸಿದಾಗ ಕ್ಷಮೆ ಕೇಳಬೇಕು ಮತ್ತು ಮತಾಂತರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

- Advertisement -

‘ಪೋಪ್‌ ಅವರು ಭಾರತಕ್ಕೆ ಆಗಮಿಸಿದಾಗ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿ ಮಾತನಾಡಬೇಕು. 350 ವರ್ಷಗಳ ಕಾಲ ಕ್ರೈಸ್ತರು ನಿರಂತರವಾಗಿ ಮತಾಂತರದ ಪ್ರಯತ್ನಗಳನ್ನು ನಡೆಸಿದ್ದಾರೆ, ಜನಾಂಗೀಯ ಹತ್ಯೆ ಮಾಡಿದ್ದಾರೆ ಮತ್ತು ಸಾಮೂಹಿಕ ಮತಾಂತರ ನಡೆಸಿದ್ದಾರೆ. ಹಾಗಾಗಿ ಇದೆಲ್ಲದಕ್ಕೂ ಪೋಪ್ ಕ್ಷಮೆ ಕೇಳಬೇಕು. ಮತಾಂತರವನ್ನು ನಿಲ್ಲಿಸುವ ಮೂಲಕ ಎಲ್ಲ ಧರ್ಮಗಳಿಗೂ ಗೌರವ ನೀಡಬೇಕು’ ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಇಟಲಿಯಲ್ಲಿ ಇತ್ತೀಚೆಗೆ ನಡೆದ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪೋಪ್‌ ಫ್ರಾನ್ಸಿಸ್‌ ಅವರನ್ನು ಭೇಟಿಯಾಗಿ ಭಾರತಕ್ಕೆ ಆಹ್ವಾನಿಸಿದ್ದರು.



Join Whatsapp