‘ಮುಸ್ಲಿಂ ಮಹಿಳೆಯರ ಮೇಲೆ ಸಂಘಪರಿವಾರ ಲೈಂಗಿಕ ದೌರ್ಜನ್ಯ’: ತ್ರಿಪುರಾದಿಂದ ಹೊರಬರುತ್ತಿರುವ ಆಘಾತಕಾರಿ ವರದಿಗಳು!

Prasthutha|

ಅಗರ್ತಲಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯ ನೆಪದಲ್ಲಿ ಒಂದು ವಾರದಿಂದ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿರುವ ತ್ರಿಪುರಾದಿಂದ ಆಘಾತಕಾರಿ ಸುದ್ದಿಗಳು ಹೊರಬೀಳುತ್ತಿದೆ.
ಮುಸಲ್ಮಾನರ ಮನೆಗಳು, ಅಂಗಡಿಗಳು ಮತ್ತು ಮಸೀದಿಗಳ ಮೇಲೆ ದಾಳಿ ನಡೆಸಿ ಸುಟ್ಟು ಹಾಕಿ ರುದ್ರ ತಾಂಡವವಾಡುತ್ತಿರುವ ಸಂಘಪರಿವಾರ ಮುಸ್ಲಿಂ ಮಹಿಳೆಯರ ಮೇಲೆಯೂ ದೌರ್ಜನ್ಯ ನಡೆಸುತ್ತಿದೆ ಎಂದು ವರದಿಯಾಗಿವೆ.

- Advertisement -

ಮುಸ್ಲಿಂ ಮಹಿಳೆಯರಿಗೆ ತೀವ್ರ ಹಿಂದುತ್ವವಾದಿ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (VHP) ಸದಸ್ಯರು ಲೈಂಗಿಕ ದೌರ್ಜನ್ಯ ನಡೆಸಿದ್ದು, ಮುಸ್ಲಿಮರು ಪೊಲೀಸರಿಗೆ ದೂರು ನೀಡಿದ್ದಾರೆ. ಪಾಣಿಸಾಗರ್‌ನಲ್ಲಿ ನಡೆದ VHP ರ‍್ಯಾಲಿಯಲ್ಲಿ ರೋಬಝಾರ್ ಪ್ರದೇಶದ ಮುಸ್ಲಿಂ ಅಂಗಡಿಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ ನಂತರ ಮಹಿಳೆಯರ ಮೇಲೆಯೂ ದಾಳಿ ನಡೆಸಲಾಗಿದೆ.
ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂಘಪರಿವಾರದ ಕಾರ್ಯಕರ್ತರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಉಲ್ಲೇಖಿಸಲಾಗಿದೆ.

ರೊವಾ ಜಾಮಿ ಮಸೀದಿ ಮೇಲೆ ಹಿಂದುತ್ವವಾದಿಗಳು ದಾಳಿ ನಡೆಸಲು ಯೋಜನೆ ರೂಪಿಸಿದ್ದು, ಇಲ್ಲಿನ ಮುಸ್ಲಿಂ ಕುಟುಂಬಗಳು ಅತ್ಯಂತ ಅಭದ್ರತೆಯಲ್ಲಿ ಜೀವನ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ದೂರಿನಲ್ಲಿ ತಿಳಿಸಲಾಗಿದೆ. ಇಬ್ಬರು ಮಹಿಳೆಯರು ಸೇರಿದಂತೆ ಏಳು ಮುಸ್ಲಿಮರು ಉತ್ತರ ತ್ರಿಪುರಾ ಜಿಲ್ಲೆಯ ಪಾಣಿಸಾಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನೂ ಹೆಚ್ಚಿನವರಿಗೆ ಕಿರುಕುಳ ನೀಡಲಾಗಿದ್ದರೂ ದೂರು ದಾಖಲಿಸಲು ಹೆದರುತ್ತಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ನಿನ್ನೆ ಸಂಘಪರಿವಾರ ನಡೆಸಿದ ದಾಳಿಯಲ್ಲಿ ಮೂರು ಅಂಗಡಿಗಳಿಗೆ ಬೆಂಕಿ ಹಚ್ಚಿ, ಮಸೀದಿಗಳನ್ನು ಧ್ವಂಸಗೊಳಿಸಲಾಗಿದೆ.
ಉತ್ತರ ತ್ರಿಪುರಾದಲ್ಲಿ ಇತ್ತೀಚಿನ ದಾಳಿ ನಡೆದಿದ್ದು, ಇಸ್ಲಾಮ್ ವಿರೋಧಿ ಘೋಷಣೆಗಳೊಂದಿಗೆ ಆಗಮಿಸಿದ ದೊಡ್ಡ ಗುಂಪು ಮಸೀದಿಗಳ ಮೇಲೆ ದಾಳಿ ನಡೆಸಿದೆ.

ಆದಾಗ್ಯೂ, ಮುಸ್ಲಿಮರ ಪ್ರತಿರೋಧದಿಂದ ಪಲಾಯನಗೈದ ಗುಂಪು ಮುಸ್ಲಿಂ ಒಡೆತನದ ಮೂರು ಅಂಗಡಿಗಳು ಮತ್ತು ಇನ್ನೊಂದು ಮಸೀದಿಯ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.

Join Whatsapp