ಪಡೆದ ಸಾಲ ಸ್ನೇಹಿತರು ಹಿಂದಿರುಗಿಸದಿದ್ದಕ್ಕೆ ನೊಂದ ಪಶುವೈದ್ಯ ಆತ್ಮಹತ್ಯೆ

Prasthutha|

ಬಾಗಲಕೋಟೆ: ಕೊಟ್ಟ ಸಾಲವನ್ನು ಸ್ನೇಹಿತರು ವಾಪಸ್ ಹಿಂದಿರುಗಿಸಿಲ್ಲ ಎಂದು ಮನನೊಂದು ಪಶುವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ  ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ನಡೆದಿದೆ.

- Advertisement -

ಪಶುವೈದ್ಯ ನಂದೆಪ್ಪ ಬಾಗೇವಾಡಿ ಆತ್ಮಹತ್ಯೆ ಮಾಡಿಕೊಂಡವರು.

ಬನಹಟ್ಟಿ ತಾಲೂಕಿನ ಹಿಪ್ಪರಗಿ ನಿವಾಸಿಯಾಗಿರುವ ನಂದೆಪ್ಪ ಅವರು ತನ್ನ ಓರ್ವ ಸಹೋದ್ಯೋಗಿ ಪಶುವೈದ್ಯನಿಗೆ 5 ಲಕ್ಷ ರೂ ಹಾಗೂ ಮತ್ತೊಬ್ಬ ಗೆಳೆಯನಿಗೆ 7 ಲಕ್ಷ ರೂಪಾಯಿ ಸಾಲು ನೀಡಿದ್ದರು. ಆದರೆ ಸಾಲ ಹಿಂದಿರುಗಿಸದ ಹಿನ್ನಲೆಯಲ್ಲಿ ನೊಂದು ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್ ​ನೋಟ್ ಪತ್ತೆಯಾಗಿದ್ದು, ಇದರಲ್ಲಿ ಸಾಲ ನೀಡಿದ್ದರ ಬಗ್ಗೆ ಉಲ್ಲೇಖಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಮಖಂಡಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Join Whatsapp