ಬಾಲಿವುಡ್ ಹಿರಿಯ ನಟ ಸತೀಂದ್ರ ಕುಮಾರ್ ನಿಧನ

Prasthutha|

ಮುಂಬೈ: ಬಾಲಿವುಡ್ ಹಿರಿಯ ನಟ ಸತೀಂದ್ರ ಕುಮಾರ್ ಖೋಸ್ಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಂಬೈನ ಕೋಕಿಲಾಲ್ ಆಸ್ಪತ್ರೆಯಲ್ಲಿ ಸತೀಂದ್ರ ಅವರನ್ನು ದಾಖಲಿಸಿದ್ದು, ತೀವ್ರ ಹೃದಯಾಘಾತದಿಂದ ಸೆ.12ರಂದು ಸಂಜೆ ನಿಧನರಾಗಿದ್ದಾರೆ.

- Advertisement -


ಹಿಂದಿ ಸಿನಿಮಾರಂಗದಲ್ಲಿ 80ರ ದಶಕದ ಪ್ರತಿಭಾನ್ವಿತ ನಟನಾಗಿ ಮಿಂಚಿದ್ದರು. ‘ಶೋಲೆ’ ಸಿನಿಮಾದಲ್ಲಿ ಬೀರ್ಬಲ್ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಇದೀಗ ಹಿರಿಯ ನಟನ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಹಿಂದಿ, ಪಂಜಾಬಿ, ಮರಾಠಿ, ಭೋಜಪುರಿ ಭಾಷೆ ಸೇರಿದಂತೆ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಗೆ ಬಗೆಯ ಪಾತ್ರಗಳ ಮೂಲಕ ಸತೀಂದ್ರ ಕುಮಾರ್ ಖೋಸ್ಲಾ ರಂಜಿಸಿದ್ದಾರೆ.